ಚಿಕ್ಕೋಡಿ : ಜಮೀನು ವಿವಾದದ ಕಾರಣದಿಂದ ಮಹಿಳೆಯೊಬ್ಬಳು ಸುಮಾರು 6 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಗೆ ಬೆಂಕಿ ಇಟ್ಟು ವಿಕೃತಿ ಮೆರೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಪ್ಪಾಸಾಬ ದಾನೋಳ್ಳಿ ಎಂಬುವವರಿಗೆ ಸೇರಿದ್ದ ಸುಮಾರು 6ಎಕರೆ ಕಬ್ಬು ನಾಶವಾಗಿದೆ ಎಂದು ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಪ್ಪಾಸಾಬ ದಾನೋಳ್ಳಿ ಎಂಬ ರೈತನಿಗೂ ಮತ್ತು ಸುನೀತ ನಾಗನೂರು ಎಂಬುವವರ ನಡುವೆ ಜಮೀನು ವಿಷಯಕ್ಕೆ ಸಣ್ಣ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ಅಪ್ಪಾಸಾಬಾ ದಾನೋಳ್ಳಿ ಸಹೋದರರ ಮೇಲೆ ಸುನೀತಾ ಸಹೋದರರು ಹಲ್ಲೆ ಮಾಡಿದ್ದರು. ಈ ಹಿಂದೆ ಕಬ್ಬು ಕಟಾವು ಮಾಡಲು ಬಂದಿದ್ದ ಕೆಲಸಗಾರರನ್ನು ಕೂಡ ಜಗಳ ಮಾಡಿಸಿ ಅವರನ್ನು ವಾಪಾಸ್ ಕಳುಹಿಸಿದ್ದರು.
ಇದನ್ನೂ ಓದಿ :ಬಿಜೆಪಿಯವರು ಎಷ್ಟೇ ಚೀರಾಡಿದರು ನಾನು ರಾಜೀನಾಮೆ ಕೊಡಲ್ಲ : ಪ್ರಿಯಾಂಕ್ ಖರ್ಗೆ
ಇದೆ ವಿಶಯಕ್ಕೆ ಬಾಳಾಸಾಬ ದಾನೊಳ್ಳಿ, ಸುನೀತಾರನ್ನು ಪ್ರಶ್ನಿಸಿದ್ದರು. ಈ ವೇಳೆ ಬಾಳಾಸಾಬ ದಾನೊಳ್ಳಿ ಮೇಲೆ ಸುನೀತಾ ಮತ್ತು ಇತರರು ಹಲ್ಲೆ ಮಾಡಿ ಬೆಳೆದ ಕಬ್ಬಿಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 6ಎಕರೆ ಪ್ರದೇಶದಲ್ಲಿ ಬೆಳೆದಿದ್ದ 10ಲಕ್ಷ ರೂಪಾಯಿ ಮೌಲ್ಯದ ಸುಮಾರು 300ಟನ್ ಕಬ್ಬು ನಾಶವಾಗಿದೆ ಎಂದು ಮಾಹಿತಿ ದೊರೆತಿದೆ. ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ದೂರು ದಾಖಲಿಸಿ 3 ದಿನಗಳಾದರೂ ಕೂಡ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.