ನೆಲಮಂಗಲ : ಬೆಂಗಳೂರಿನ ಹೊರವಲಯ ದಾಬಸ್ ಪೇಟೆ ಸಮೀಪ ಕಾರು, ಆಟೋ, ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಓರ್ವ ವ್ಯಕ್ತಿ ಅಸುನೀಗಿದ್ದು, ನಾಲ್ಕಕ್ಕು ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ.
ರಾಷ್ಟ್ರೀಯ ಹೆದ್ದಾರಿ 48ರ ದಾಬಸ್ ಪೇಟೆ ಬಳಿ ಘಟನೆ ನಡೆದಿದೆ. ನೆಲಮಂಗಲಕ್ಕೆ ಬರುತ್ತಿದ್ದ ಆಟೋ ರಸ್ತೆ ಬದಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳಲು ಆಟೋವನ್ನು ನಿಲ್ಲಿಸಿದ್ದರು. ಈ ವೇಳೆ ವೇಗವಾಗಿ ಬಂದ ಹುಂಡೈ ವರುಣ ಕಾರು ಆಟೋಗೆ ಡಿಕ್ಕಿಯಾಗಿ, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ಗಾಯಾಳುಗಳು ನೋವಿನಿಂದ ಒದ್ದಾಡಿದ್ದಾರೆ.
ಇದನ್ನೂ ಓದಿ : ಸೇನವಾಹನ ಪ್ರಪಾತಕ್ಕೆ ಉರುಳಿ ಅವಘಡ : ಕೊಡಗು ಮೂಲದ ಮತ್ತೊಬ್ಬ ಯೋಧ ಹುತಾತ್ಮ !
ಈ ಅಪಘಾತದಲ್ಲಿ ಪೆಮ್ಮನಹಳ್ಳಿಯ ಈರಣ್ಣ(50) ಎಂಬಾತ ಸಾವನ್ನಪ್ಪಿದ್ದು. ವೆಂಕಟಮ್ಮ (60), ಕೆಂಪರಾಜು(30) ಮತ್ತು ವಿದ್ಯಾರ್ಥಿ ನೂತನ್ (20), ಆಟೋ ಚಾಲಕ ನವೀನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ಆಂಬ್ಯುಲೆನ್ಸ್ ಮುಖಾಂತರ ದಾಬಸ್ ಪೇಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಅಪಘಾತ ಮಾಡಿದ ಕಾರಿನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.