Tuesday, January 7, 2025

ಹೊಸ ವರ್ಷದ ಹೊಸ್ತಿಲಲ್ಲಿ ದರ್ಶನ್​ಗೆ ಬಿಗ್​ ಶಾಕ್​ : ಸುಪ್ರೀಂಕೋರ್ಟ್ ಕದ ತಟ್ಟಿದ ಪೊಲೀಸರು !

ಬೆಂಗಳೂರು : ಹೊಸ ವರ್ಷಕ್ಕೆ ಇನ್ನೇನು ಎರಡೆ ದಿನಗಳು ಬಾಕಿ ಇದೆ. ಈ ವೇಳೆ ನಟ ದರ್ಶನ್​ಗೆ ರಾಜ್ಯ ಸರ್ಕಾರ ಬಿಗ್​ಶಾಕ್​ ನೀಡಿದ್ದು. ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಗೃಹ ಇಲಾಖೆ ಅನುಮತಿ ನೀಡಿದೆ ಎಂದು ಮಾಹಿತಿ ದೊರೆತಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್​ಗೆ ರಾಜ್ಯ ಗೃಹ ಇಲಾಖೆ ಬಿಗ್​ ಶಾಕ್​ ನೀಡಿದೆ. ಹೈಕೋರ್ಟ್​ ದರ್ಶನ್​ಗೆ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಹೋಗಲು ಪೊಲೀಸರು ಗೃಹ ಇಲಾಖೆಯ ಬಳಿಯಲ್ಲಿ ಅನುಮತಿ ಕೋರಿದ್ದರು. ಇದರ ಬಗ್ಗೆ ಪರಿಶೀಲನೆ ನಡೆಸಿದ ರಾಜ್ಯ ಗೃಹ ಇಲಾಖೆ ಪೊಲೀಸರಿಗೆ ಸುಪ್ರಿಂ ಕೋರ್ಟ್​ಗೆ ಹೋಗಲು ಅನುಮತಿ ನೀಡಿದೆ.

ಇದನ್ನೂ ಓದಿ :ವಿವಾದಕ್ಕೆ ಕಾರಣವಾದ ಥರ್ಡ್​ ಅಂಪೈರ್​ ತೀರ್ಪು: ಜೈಸ್ವಾಲ್​ ನಾಟೌಟ್​ ಎನ್ನುತ್ತಿರುವ ಕ್ರಿಕೆಟ್​ ಪ್ರಿಯರು!

ಬಹುತೇಕ ನಾಳೆ ಅಥವಾ ನಾಡಿದ್ದು ಬೆಂಗಳೂರು ಪೊಲೀಸರು ದರ್ಶನ್​ಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಿದ್ದಾರೆ. ಪೊಲೀಸರ ಈ ನಡೆ ದರ್ಶನ್​ಗೆ ತಲೆನೋವಾಗಿ ಪರಿಣಮಿಸಿದೆ.

RELATED ARTICLES

Related Articles

TRENDING ARTICLES