ಬೀದರ್ : ಎರಡು ದಿನಗಳ ಹಿಂದೆ ಯುವಕನೊಬ್ಬ ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಸಿದ್ದನು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಯುವಕನನ್ನು ಶಾಸಕ ಶರಣು ಸಲಗಾರ್ ಭೇಟಿಯಾಗಿದ್ದು. ಈ ವೇಳೆ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಯುವಕ ರಾಜ್ಯ ಸರ್ಕಾರಕ್ಕೆ ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇದ ಮಾಡುವಂತೆ ಮನವಿ ಮಾಡಿ ಸಾವನ್ನಪ್ಪಿದ್ದಾನೆ.
ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಮಹಾರಾಷ್ಟ್ರ ಉಮ್ಮರ್ಗಾ ನಗರದ ಉಪಾಸೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಶಾಸಕ ಶರಣು ಸಲಗಾರ್ ಯುವಕನನ್ನು ಭೇಟಿಯಾಗಿದ್ದರು. ಈ ವೇಳೆ ಶಾಸಕ ಶರಣು ಸಲಗಾರ್ ಫೇಸ್ಬುಕ್ ಲೈವ್ ಬಂದಿದ್ದು, ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇದ ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮನೆಯವರ ವಿರೋಧದ ನಡುವೆ ಮದುವೆ : ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆ !
ಈ ವೇಳೆ ಮಾತನಾಡಿದ ಯುವಕ ‘ಆನ್ಲೈನ್ ಗೇಮ್ನಿಂದ ಈಗಾಗಲೆ ಎಲ್ಲವನ್ನೂ ಕಳೆದುಕೊಂಡಿದ್ದೇನೆ, ಇದರಲ್ಲಿ ಹಣ ಬರುತ್ತೆ, ಬರುತ್ತೆ ಅಂತಾ ಆಸೆ ಇರುತ್ತೆ ಆದರೆ ಹಣ ಬರೋದಿಲ್ಲ, ಈ ಆಟದಲ್ಲಿ ನನಗ ಏಳೆಂಟು ವರ್ಷದ ಅನುಭವ ಇದೆ. ಇದನ್ನು ಆಡುವುದರಿಂದ ಯಾವುದೇ ಲಾಭವಿಲ್ಲ. ದಯವಿಟ್ಟು ಈ ಆಟವನ್ನು ಆಡಬೇಡಿ ಎಂದು ಯುವಕ ಮನವಿ ಮಾಡಿದ್ದಾನೆ.
ಈ ವೇಳೆ ಮಾತನಾಡಿದ ಶಾಸಕ ದಯವಿಟ್ಟು ಯಾರೂ ಆನ್ಲೈನ್ ಗೇಮ್ ಆಡಬೇಡಿ, ಈ ಆಟವನ್ನು ನಿಮ್ಮನ್ನು, ನಿಮ್ಮ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುತ್ತವೆ. ಈ ಆಟಗಳನ್ನು ಆಡಿಸುವ ಎಲ್ಲರು ಕೋಟಿಗಟ್ಟಲೆ ದುಡ್ಡು ಮಾಡಿ ಆರಾಮಾಗಿದ್ದಾರೆ. ಆದರೆ ಅವರು ನಿಮ್ಮನ್ನು ಬೀದಿಗೆ ತರುತ್ತಾರೆ ಎಂದು ಶಾಸಕ ಶರಣು ಸಲಗಾರ್ ಕೈಮುಗಿದು ಮನವಿ ಮಾಡಿದ್ದಾರೆ.