Sunday, December 29, 2024

ಮನೆಯವರ ವಿರೋಧದ ನಡುವೆ ಮದುವೆ : ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆ !

ಬೆಂಗಳೂರು :  ಪ್ರೀತಿ ಮಾಡಿದ ಕಾರಣಕ್ಕೆ ಮನೆ ಬಿಟ್ಟು ಬಂದಿದ್ದ ಯುವತಿ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ ನಡೆದಿದೆ ಎಂದು ಮಾಹಿತಿ ದೊರೆತಿದೆ.

ರಂಜಿತಾ ಎಂಬ 25 ವರ್ಷದ ಯುವತಿ ಕಿಶೋರ ಎಂಬಾತನನ್ನು ಪ್ರೀತಿಸಿದ್ದಳು. ಈ ಪ್ರೀತಿಗೆ ಯುವತಿಯ ಮನೆಯವರ ವಿರೋಧವು ಇತ್ತು. ಆದರೆ ಈ ವಿರೋದಗಳಿಗೆ ಹೆಚ್ಚು ತಲೆ ಕೊಡದ ಯುವತಿ ರಂಜಿತಾ ಕಿಶೋರನನ್ನೆ ಮದುವೆಯಾಗಿದ್ದಳು. ದಿನ ಕಳೆದಂತೆ ರಂಜಿತಾ ಗರ್ಭಿಣಿಯಾಗಿದ್ದಳು. ಈ ವಿಷಯ ತಿಳಿದ ನಂತರ ಯುವತಿ ಮನೆಯವರು ಮಾತನಾಡಲು ಆರಂಭಿಸಿದ್ದರು. ಆದರೆ ಗಂಡನ ಪರಸ್ತ್ರೀ ಸಹವಾಸದಿಂದ ಬೇಸತ್ತಿದ್ದ ಯುವತಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ಧಾರೆ.

ಇದನ್ನೂ ಓದಿ : ಮನಮೋಹನ ಸಿಂಗ್​ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭ !

ಯುವಕ ಕಿಶೋರ್​ಗೆ ಮದುವೆಯಾದ ನಂತರ ಪರಸ್ತ್ರೀಯರ ಮೋಹ ಬೆಳೆದಿತ್ತು. ನಂಬಿ ಬಂದಿದ್ದ ಹೆಂಡತಿಯ ಕೈ ಬಿಟ್ಟು ಇಬ್ಬರು ಸ್ತ್ರೀಯರ ಜೊತೆಗೆ ಲವ್ವಿ-ಡವ್ವಿ ಆಟ ಶುರು ಮಾಡಿದ್ದನು. ಇಷ್ಟೇ ಅಲ್ಲದೆ ಗಂಡನಿಗೆ ಇತ್ತೀಚೆಗೆ ಬೆಟ್ಟಿಂಗ್ ಚಟ ಕೂಡ ಆರಂಭವಾಗಿತ್ತು. ಬೆಟ್ಟಿಂಗ್​ ಹಣ ತಂದುಕೊಡುವಂತೆ ಹೆಂಡತಿಗೆ ಕಿರುಕುಳವನ್ನು ನೀಡುತ್ತಿದ್ದನು. ಇವೆಲ್ಲದರಿಂದ ಬೇಸತ್ತ ಯುವತಿ ರಂಜಿತಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೃತ ಯುವತಿ ಸಹೋದರ ಕಿಶೋರ್ ವಿರುದ್ದ ಬ್ಯಾಡರಗಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಕಿಶೋರ್​ಗೆ ಸಂಬಂಧವಿದ್ದ ನಿರ್ಮಾಲ, ವಿನುತಾ ಸೇರಿದಂತೆ 10 ಜನರ ವಿರುದ್ದ FIR ದಾಖಲಾಗಿದೆ. ತನ್ನ ತಂಗಿಗೆ ಚಿತ್ರಹಿಂಸೆ ನೀಡಿದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಯುವತಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES