ನವದೆಹಲಿ : ಭಾರತದ ಮಾಜಿ ಪ್ರಧಾನಿ, ಮಹಾನ್ ಆರ್ಥಿಕ ತಜ್ಙ, ಪ್ರಾಮಾಣಿಕ ರಾಜಕಾರಣಿ, ಸಜ್ಜನ ಧುರೀಣ, ಆರ್ಥಿಕ ಸುಧಾರಣೆಗಳ ಜನಕ, ಮಿತಭಾಷಿ, ವಿನಮ್ರತೆಯ ಸಾಕಾರ ಮೂರ್ತಿ ಮನಮೋಹನ ಸಿಂಗ್ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ನವದೆಹಲಿಯ ನಿಗಮ್ ಭೋದ್ ಘಾಟನಲ್ಲಿ ಮಾಜಿ ಪ್ರಧಾನಿಯ ಅಂತ್ಯಸಂಸ್ಕಾರ ನೆರವೇರಿದ್ದು. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣ ಸಚಿವ ರಾಜ್ನಾಥ್ ಸಿಂಗ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಜೆ.ಪಿ ನಡ್ಡಾ, ರಾಹುಲ್ ಗಾಂಧಿ, ಭಾಗಿಯಾಗಿದ್ದರು. ಕೇವಲ ಭಾರತ ಮಾತ್ರವಲ್ಲದೆ ಭೂತಾನ್ ದೊರೆ ಜಿಗ್ಮೆ ಖೇಸರ್ ನ್ಯಾಮ್ಗೇಲ್ ವಾಂಗ್ಚುಕ್, ಸೇರಿದಂತೆ ವಿದೇಶಿ ರಾಜತಾಂತ್ರಿಕರು ಮಾಜಿ ಪ್ರಧಾನಿಗೆ ಗೌರವ ನಮನ ಸೂಚಿಸಿದರು.
ಇದನ್ನೂಓದಿ : ಹೊನ್ನಾವರದಲ್ಲಿ ಪ್ರವಾಸಿ ಬಸ್ ಪಲ್ಟಿ : 20ಕ್ಕೂ ಹೆಚ್ಚು ಪ್ರವಾಸಿಗರಿಗೆ ಗಾಯ !
ಮೂರು ಸೇನಾ ಪಡೆಗಳು ಸಿಂಗ್ ಅವರಿಗೆ ಸೇನಾ ಗೌರವವನ್ನು ಸಲ್ಲಿಸಿ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಮನಮೋಹನ್ ಸಿಂಗ್ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು. ನಂತರ ಕುಟುಂಬಸ್ಥರು ಸಿಖ್ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿ, ಅಗ್ನಿ ಸ್ಪರ್ಷ ಮಾಡು ಮುಖಾಂತರ ದೇಶ ಕಂಡ ಖ್ಯಾತ ಅರ್ಥ ಶಾಸ್ತ್ರಜ್ಙನಿಗೆ ಕಣ್ಣೀರ ವಿದಾಯ ಹೇಳಲಾಗಿದೆ.