ಮಂಡ್ಯ : ಜಿಲ್ಲೆಯ ಪಾಂಡವಪುರ ಪೊಲೀಸ್ ಠಾಣೆ ಇಂದು ಹೊಡೆದಾಟಕ್ಕೆ ಸಾಕ್ಷಿಯಾಗಿದ್ದು. ಸಾಗರ್ ಎಂಬಾತ ಪೊಲೀಸರ ಮೇಲೆಯೆ ಹಲ್ಲೆ ಮಾಡಿದ್ದಾನೆ. ಇದೀಗ ಪೊಲೀಸರು ಹಲ್ಲೆ ನಡೆಸಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯ ಜಿಲ್ಲೆಯ, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಪಾಂಡವಪು ಮಾಜಿ ಪುರಸಭೆ ಅಧ್ಯಕ್ಷನ ಮಗ ಸಾಗರ್ ಎಂಬಾತನ ವಿರುದ್ದ ಜಮೀನು ವಿಚಾರವಾಗಿ ದೂರು ಬಂದ ಹಿನ್ನಲೆ ಪೊಲೀಸರು ಆತನನ್ನು ಠಾಣೆಗೆ ಕರೆಸಿದ್ದರು. ಇಂದು ವಿಚಾರಣೆಗೆ ಹಾಜರಾಗಿದ್ದ ಸಾಗರ್ ಮತ್ತು ಠಾಣೆಯ ಪೊಲೀಸರ ನಡುವೆ ವಾಗ್ವಾದ ಉಂಟಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಇದನ್ನೂ ಓದಿ : ಕಂಟ್ರ್ಯಾಕ್ಟರ್ ಆತ್ಮಹತ್ಯೆ : ರೈಲ್ವೇ ಪೊಲೀಸರ ಬದಲು, ಸಿಐಡಿ ತನಿಖೆ ಮಾಡುವಂತೆ ಹೇಳಿದ್ದೇನೆ : ಪ್ರಿಯಾಂಕ್ ಖರ್ಗೆ
ವಿಚಾರಣೆಗೆ ಹಾಜರಾಗಿದ್ದ ಸಾಗರ್ ಪೊಲೀಸರ ಕಪಾಳಕ್ಕೆ ಹೊಡೆದಿದ್ದು. ಅಲ್ಲಿಗೆ ಬಂದ ಇತರ ಪೊಲೀಸರ ಕೊರಳ ಪಟ್ಟಿಯನ್ನು ಹಿಡಿದು ದರ್ಪ ಮೆರೆದಿದ್ದಾನೆ. ಇದರ ಬೆನ್ನಲ್ಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.