Sunday, December 29, 2024

ದರ್ಶನ್​ ಜೊತೆಗೆ ಮತ್ತೆ ಸಿನಿಮಾ ಮಾಡೇ ಮಾಡುತ್ತೇನೆ : ದಿನಕರ್ ತೂಗುದೀಪ್​

ಬೆಂಗಳೂರು : ನಟ ದರ್ಶನ್​ ಸಹೋದರ ಮತ್ತು ನಿರ್ದೇಶಕನಾಗಿರುವ ದಿನಕರ್ ತೂಗುದೀಪ್​  ನಗರದಲ್ಲಿ ‘ರಾಯಲ್​’ ಎಂಬ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದರ್ಶನ್​ಗೆ  ನಾನು ಸಿನಿಮಾ ಮಾಡೋದು ಕನ್ಫರ್ಮ್​ ಎಂದು ಹೇಳಿದರು.

ರಾಯಲ್​ ಸಿನಿಮಾದ ಸುದ್ದಿಗೋಷ್ಟಿಯಲ್ಲಿ  ಭಾಗವಹಿಸಿ ಮಾತನಾಡಿದ ದಿನಕರ್​ ತೂಗುದೀಪ್ ದರ್ಶನ್​ ಬಗ್ಗೆ ಮಾತನಾಡಿದರು ‘ ನಾವಿ ಅಣ್ಣ-ತಮ್ಮ ಬೇರೆ ಆಗಿದೀವಿ ಅಂತ ಯಾರೂ ಹೇಳಿದರು, ಗಂಡ-ಹೆಂಡತಿ ಮಧ್ಯೆ ಹೇಗೆ ಜಗಳ ಇರುತ್ತದೋ, ಹಾಗೆ ಅಣ್ಣ-ತಮ್ಮ ಅಂದ ಮೇಲೆ ಜಗಳ ಇದ್ದೆ ಇರುತ್ತೆ. ನಾನು ದರ್ಶನ್​ ಮಾತನಾಡುತ್ತಲೆ ಇರುತ್ತೇವೆ. ಅತ್ತಿಗೆ ಜೊತೆಗೆ ಯಾವಾಗಲೂ ಕಾಂಟಾಕ್ಟ್​​ನಲ್ಲಿರುತ್ತೇವೆ. ದರ್ಶನ್​ಗೆ ಹೀಗ ಬೆನ್ನು ನೋವಿದೆ, ಅದಕ್ಕೆ ಚಿಕಿತ್ಸೆಗೆ ಒಳಗಾಗಿದ್ದಾರೆ.ಎಂದು ಹೇಳಿದರು.

ಇದನ್ನೂ ಓದಿ : ಭಾರತದ ಆರ್ಥಿಕತೆಯ ಹರಿಕಾರ ಮನಮೋಹನ ಸಿಂಗ್​ ಪಂಚಭೂತಗಳಲ್ಲಿ ಲೀನ !

ಮುಂದುವರಿದು ಮಾತನಾಡಿದ ದಿನಕರ್ ‘ನಾನು ದರ್ಶನ್​ಗೆ ಸಿನಿಮಾ ಮಾಡೊದು ಕನ್ಫರ್ಮ್​, ದರ್ಶನ್​ ಇಂಡಸ್ಟ್ರೀಯಲ್ಲಿ ನನಗಿಂತ ಸೀನಿಯರ್​ ಇದ್ದಾನೆ. ಅವನಿಗೆ ನಾನು ಸಿನಿಮಾ ಮಾಡುತ್ತೇನೆ ಎಂದು ಹೇಳಿದರು. ​ ದೊಡ್ಮನೆ ಬಗ್ಗೆ ಮಾತನಾಡಿದ ದಿನಕರ್​ ‘ನಮ್ಮ ಕುಟುಂಬ ಮತ್ತು ದೊಡ್ಮನೆ ಕುಟುಂಬದ ನಡುವೆ ತುಂಬಾ ಹಳೆಯ ಬಾಂಡಿಂಗ್​ ಇದೆ. ನಮ್ಮ ಮೈಸೂರಿನ ಮುಪಾ ಕೃಪಾ ( ಮುತ್ತುರಾಜ್​ ಪಾರ್ವತಮ್ಮ) ನಿವಾಸಕ್ಕೆ ಅವರ ಹೆಸರೆ ಇಟ್ಟಿದ್ದೇವೆ. ಏಂದು ಹೇಳಿದರು.

RELATED ARTICLES

Related Articles

TRENDING ARTICLES