ಸಿನಿಮಾ : 2024ಕ್ಕೆ ಗುಡ್ಬಾಯ್ ಹೇಳೋದಕ್ಕೆ ಇನ್ನೇನು ಕೆಲವೆ ದಿನಗಳಿವೆ. ಇದರ ನಡುವೆ ಈ ವರ್ಷ ಸ್ಯಾಂಡಲ್ ವುಡ್ನಲ್ಲಿ ಜನರಿಗೆ ಹೆಚ್ಚು ಇಷ್ಟವಾದ ಹಾಡುಗಳು ಯಾವುವು ಎಂದು ನಿಮಗೆ ತಿಳಿದಿದೆಯಾ. ತಿಳಿದಿಲ್ಲದಿದ್ದರೆ ಈ ವರದಿಯನ್ನು ಪೂರ್ತಿ ನೋಡಿ.
ಕನ್ನಡದಲ್ಲಿ ಈ ವರ್ಷ ಬಹಳಷ್ಟು ಹಾಡುಗಳು ಸೌಂಡ್ ಮಾಡಿವೆ. ಅದರಲ್ಲಿ ಯಾವುದು ಟಾಪ್ ಐದು ಹಾಡುಗಳ ಅಂತ ಆಯ್ಕೆ ಮಾಡೋದು ಬಹಳ ಕಷ್ಟ ಅಂತಹದ್ರಲ್ಲಿ ಈ ವರ್ಷ ಜನರ ಬಾಯಲ್ಲಿ ಅತೀ ಹೆಚ್ಚು ಗುನುಗಿದ ಮತ್ತು ಸೋಷಿಯಲ್ ಮಿಡಿಯಾದಲ್ಲಿ ಸೌಂಡ್ ಮಾಡಿದ, ಆ್ಯಂಡ್ ಥಿಯೇಟರ್ನಲ್ಲೂ ಧೂಳೆಬ್ಬಿಸಿದ ಹಾಡುಗಳನ್ನ ನಾವು ಆಯ್ಕೆ ಮಾಡಿಕೊಂಡು ಬಂದಿದ್ದಿವಿ.
ಹಿತ್ತಲಕ್ಕ ಕರೀ ಬ್ಯಾಡ ಮಾವ………
ಪ್ರತೀ ವರ್ಷವೂ ಯೋಗರಾಜ್ ಭಟ್ ಬರೆದಿರೋ ಹಾಡುಗಳು ಟಾಪ್ ಲಿಸ್ಟ್ನಲ್ಲಿರುತ್ತವೆ ಈ ವರ್ಷವೂ ಕೂಡ ಅವರೇ ಬರೆದ, ಮತ್ತು ಅವರೆ ನಿರ್ದೇಶನ ಮಾಡಿದ ಕರಟಕ ದಮನಕ ಸಿನಿಮಾದ ಹಾಡು ಟಾಪ್ ಫೈವ್ನಲ್ಲಿದೆ. ಕರಟಕ ದಮನಕ ಸಿನಿಮಾ ‘ಹಿತ್ತಲಕ್ಕ ಕರೀ ಬ್ಯಾಡ ಮಾವ’ ಹಾಡು ಸಖತ್ ಸೌಂಡ್ ಮಾಡದೆ. ಇದರ ಜೊತೆಗೆ ನಿಶ್ವಿಕಾ ಮತ್ತು ಪ್ರಭುದೇವ ಸ್ಟೇಪ್ಸ್ ಕೂಡ ಈ ಸಾಂಗ್ ಹಿಟ್ ಆಗೋಕೆ ಕಾರಣವಾಗಿದೆ ಎಂದು ಹೇಳಬಹುದು.
ಉಪೇಂದ್ರ ರಚನೆ ಟ್ರೋಲ್ ಸಾಂಗ್…….
ಇನ್ನೂ ಇಡೀ ವರ್ಷ ನಮ್ಮನ್ನ ಸಿನಿಮಾಗೆ ಕಾಯೋ ಹಾಗೆ ಮಾಡಿದ ರಿಯಲ್ ಸ್ಟಾರ್ ಸಿನಿಮಾದ ಹಾಡು ಟಾಪ್ ನಾಲ್ಕನೇ ಸ್ಥಾನದಲ್ಲಿದೆ. ಈ ಹಾಡಿನ ವಿಶೇಷತೆ ಏನು ಅಂದರೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡಿದ ಎಲ್ಲಾ ಟ್ರೋಲ್ಗಳನ್ನೇ ಲಿರಿಕ್ಸ್ ಮಾಡಿಕೊಂಡು ಈ ಸಾಂಗ್ ರಚಿಸಲಾಗಿದೆ. ಐದು ಭಾಷೆಗಳಲ್ಲಿ ರಿಲೀಸ್ ಆದ ಈ ಸಾಂಗ್ ಎಲ್ಲಾ ಭಾಷೆಯಲ್ಲೂ ಸೂಪರ್ ಹಿಟ್ ಆಗಿದೆ ಏಕೆಂದರೆ ಎಲ್ಲಾ ಭಾಷೆಯಲ್ಲಿ ಅಲ್ಲಿನ ಟ್ರೋಲ್ ಪದಗಳನ್ನೆ ಬಳಸಿಕೊಂಡು ಸಾಂಗ್ ರಚಿಸಲಾಗಿದೆ.
ಭೀಮ ಸಿನಿಮಾದ ‘ ಡೋಂಟ್ ವರಿ ಬೇಬಿ ಚಿನ್ನಮ್ಮ…….
ನಟ ದುನಿಯಾ ವಿಜಯ್ ಅಭಿನಯದ ಭೀಮ ಸಿನಿಮಾದ ‘ಡೋಂಟ್ ವರಿ ಬೇಬಿ ಚಿನ್ನಮ್ಮ’ ಹಾಡು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಹಾಡಿನ ಜೊತೆಗೆ ಚರಣ್ ರಾಜ್ ಸಂಗೀತದ ಸಾಂಗ್‌ಗೆ ನಾಗಾರ್ಜುನ ಶರ್ಮಾ ಸಾಲುಗಳನ್ನು ಪೋಣಿಸಿದ್ದಾರೆ. ಗಣ ಮುತ್ತು ವಾಯ್ಸ್‌ನಲ್ಲಿ ಸಾಂಗ್ ಕೇಳುಗರ ಗಮನ ಸೆಳೆದಿತ್ತು. ಅದರ ಜೊತೆಗೆ ಬೆಂಗಳೂರು ನಗರದ ಲೋಕಲ್ ಏರಿಯಾಗಳಲ್ಲಿ ಸಾಂಗ್ ಶೂಟ್ ಮಾಡಿರುವ ಕಾರಣ ನೋಡುಗರಿಗೆ ಈ ಸಾಂಗ್ ಹೆಚ್ಚು ಕಿಕ್ ನೀಡಿದೆ.
ಕೃಷ್ಣಂ ಪ್ರಣಯ ಸಖಿಗೆ ದೊರೆತ ಮೊದಲೆರಡು ಸ್ಥಾನಗಳು………
ಕಳೆದ ಕೆಲ ವರ್ಷಗಳಿಂದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾಗಳು ಹೆಚ್ಚು ಸದ್ದು ಮಾಡಿರಲಿಲ್ಲ. ಆದರೆ ಈ ವರ್ಷ ತೆರೆಕಂಡ ಕೃಷ್ಣಂ ಪ್ರಣಯ ಸಖಿ ಸಿನಿಮಾ ಎಲ್ಲಾ ವರ್ಗದ ಜನರಿಗೂ ಹೆಚ್ಚು ಇಷ್ಟವಾಗಿದ್ದು. ಇದರಲ್ಲಿನ ಹಾಡುಗಳು ಈ ಸಿನಿಮಾಗೆ ಮತ್ತಷ್ಟು ಕಳೆಯನ್ನು ತಂದುಕೊಟ್ಟಿವೆ.
ಹೌದು ಕೃಷ್ಣಂ ಪ್ರಣಯ ಸಖಿ ಸಿನಿಮಾದ ‘ಚಿನ್ನಮ್ಮ..ಚಿನ್ನಮ್ಮ..ನೀ ನನ್ನ ಮುದ್ದು ಗುಮ್ಮ’ ಟಾಪ್ ಎರಡನೇ ಸ್ಥಾನವನ್ನು ಪಡೆದಿದ್ದು. ಬಿಡುಗಡೆಯಾದ ಒಂದೆ ದಿನಕ್ಕೆ ಮಿಲಿಯನ್ಗಟ್ಟಲೆ ವ್ಯೂವ್ಸ್ ಪಡೆದಿತ್ತು. ಅದರ ಜೊತೆಗೆ ಕವಿರಾಜ್ ಅವರ ಅದ್ಭುತ ಸಾಹಿತ್ಯ ಮತ್ತು ಕೈಲಾಶ್ ಖೇರ್ ಮತ್ತು ಇಂದು ನಾಗರಾಜ್ ಅವರ ಧ್ವನಿ ಈ ಹಾಡಿಗೆ ಮತ್ತಷ್ಟು ಜೀವ ತುಂಬಿತ್ತು.
ದ್ವಾಪರ ಹಾಡಿಗೆ ವರ್ಷದ ಅತ್ಯುತ್ತಮಮ ಸಾಂಗ್ ಪಟ್ಟ…..
ಇನ್ನು 2024ರ ಟಾಪ್ ಒಂದನೇ ಸ್ಥಾನದಲ್ಲಿರುವ ಸಾಂಗ್ ಯಾವುದೆಂದರೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ಜೇನ ಧನಿಯೋಳೆ, ಮೀನ ಕಣ್ಣೋಳೆ’ ಹಾಡು ಈ ವರ್ಷ ಜನರಿಗೆ ಹೆಚ್ಚು ಅಚ್ಚುಮೆಚ್ಚಿನ ಹಾಡಾಗಿ ಹೊರಹೊಮ್ಮಿದೆ. ಈ ಹಾಡು ಸಮಾಜಿಕ ಜಾಲತಾಣದ ರೀಲ್ಸ್ನಲ್ಲಿಯೂ ಕೋಟಿಗಟ್ಟಲೆ ವ್ಯೂಸ್ ಪಡೆದು ಸೋಷಿಯಲ್ ಮೀಡಿಯಾವನ್ನೆ ಶೇಕ್ ಮಾಡಿತ್ತುಬ ಎಂದರೆ ಅತಿಶಯೋಕ್ತಿ ಅಲ್ಲ ಎನ್ನಬಹುದು.
ಇನ್ನೇನು 2024ಕ್ಕೆ ಗುಡ್ಬಾಯ್ ಹೇಳುವ ಸಮಯ ಹತ್ತಿರವಾಗಿದ್ದು. ಈ ಸಮಯದಲ್ಲಿ ಯಾವೆಲ್ಲ ವಿಚಾರಗಳು ನಮ್ಮ ಮನಸಿಗೆ ಮುದ ನೀಡಿದವು, ಯಾವೆಲ್ಲ ವಿಚಾರಗಳು ನಮಗೆ ನೋವು ನೀಡಿದೆವು ಎಂಬುದನ್ನು ನೆನಪು ಮಾಡಿಕೊಳ್ಳುತ್ತೇವೆ. ಅದೇ ರೀತಿ ಪವರ್ ಟಿ,ವಿ ಈ ವರ್ಷ ಜನರ ಮನಸಿಗೆ ಹೆಚ್ಚು ಮುದ ನೀಡಿದ ಹಾಡುಗಳನ್ನು ಪವರ್ ಟಿ,ವಿ ನೆನಪಿಸಿದೆ.