Sunday, December 29, 2024

ಕಂಟ್ರ್ಯಾಕ್ಟರ್​ ಆತ್ಮಹತ್ಯೆ : ರೈಲ್ವೇ ಪೊಲೀಸರ ಬದಲು, ಸಿಐಡಿ ತನಿಖೆ ಮಾಡುವಂತೆ ಹೇಳಿದ್ದೇನೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಬೀದರ್​ನಲ್ಲಿ ಕಂಟ್ರ್ಯಾಕ್ಟರ್​ ಸಚಿನ್​ ಆತ್ಮಹತ್ಯೆಯ ಕುರಿತು ಮಾಧ್ಯಮ ಸುದ್ದುಗೋಷ್ಟಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್​ ಖರ್ಗೆ ‘ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಆದರೆ ಇದರ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು. ಇದನ್ನು ಸಿಐಡಿಗೆ ವಹಿಸಲು ಗೃಹ ಸಚಿವರ ಜೊತೆಗೆ ಮಾತನಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ಅವದಿಯಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆ ಮಾತನಾಡಿದ ಪ್ರಿಯಾಂಕ್​ ಖರ್ಗೆ, ಈಶ್ವರಪ್ಪನ ಪ್ರಕರಣವನ್ನು ನೆನಪಿಸಿಕೊಂಡರು ‘ಈಶ್ವರಪ್ಪನ ಹೆಸರನ್ನು ಆತ್ಮಹತ್ಯೆ ಮಾಡಿಕೊಂಡ ಯುವಕ ತನ್ನ ಡೆತ್​ ನೋಟ್​ನಲ್ಲಿ ಬರೆದಿದ್ದ. ಇದರಲ್ಲಿ ಈಶ್ವರಪ್ಪ ನೇರ ಆರೋಪಿಯಾಗಿದ್ದರು. ಅದಕ್ಕೆ ಅವರಿಗೆ ಬಿಜೆಪಿಯವರು ಟಿಕೆಟ್​ ಕೊಡಲಿಲ್ಲ. ಆದರೆ ಈ ಪ್ರಕರಣದಲ್ಲಿ ಯುವಕ ಸಚಿನ್​ ಖಾಸಗಿ ಕಂಪನಿ ಮೇಲೂ ದೂರು ನೀಡಿದ್ದಾನೆ. ಆ ಕೇಸ್​ನಲ್ಲಿ 8ಜನ ಆರೋಪಿಗಳಿದ್ದಾರೆ. 65 ಲಕ್ಷ ಹಣವನ್ನು ಬ್ಯಾಂಕ್​ ಮೂಲಕ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಇದರ ಬಗ್ಗೆ ನಾನು ಎಲ್ಲೂ ಮೌಖಿಕ ಆದೇಶವನ್ನು ನೀಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಪ್ರೀತಿಯ ಶ್ವಾನದ ನಿಧನಕ್ಕೆ ಕಣ್ಣೀರನ ಪತ್ರ ಬರೆದು ವಿದಾಯ ಹೇಳಿದ ಗೀತಾ ಶಿವರಾಜ್​ಕುಮಾರ್​ !

ಈ ಪ್ರಕರಣವನ್ನು ರೈಲ್ವೇ ಪೊಲೀಸರ ಕೈಲಿ ಸರಿಯಾಗಿ ತನಿಖೆ ನಡೆಸಲು ಸಾಧ್ಯವಾಗಲ್ಲ. ಈ ಪ್ರಕರಣವನ್ನು ಸಿಐಡಿಗೆ ಕೊಡಿ ಎಂದು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಯಾರೇ ಆಗಲಿ, ಪಾರದರ್ಶಕವಾಗಿ ತನಿಖೆ ಆಗಬೇಕು. ಆದರೆ ಆರೋಪಿಗಳು ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಪೊಲೀಸರು ವಿಚಾರಣೆ ಕರೆದರೆ ಅವರು ಹೋಗಿ ವಿಚಾರಣೆ ಎದುರಿಸುತ್ತಾರೆ ಎಂದು ಹೇಳಿದರು.

ಡೆತ್ ನೋಟ್​ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್​ ಖರ್ಗೆ ‘ ಡೆತ್​ನೋಟ್​ ಫೇಕ ಇದೆಯ ಎಂಬುದು ನನಗೆ ಗೊತ್ತಿಲ್ಲ. ಮೃತ ವ್ಯಕ್ತಿಯೆ ಬರೆದಿದ್ದಾರೆ ಎಂಬುದು ನನಗೆ ಹೇಗೆ ತಿಳಿಯುತ್ತೆ. ಆದರೆ ಅದರ ಎಫ್​.ಎಸ್​.ಎಲ್​ ರಿಪೋಟ್​ ಬರಲಿ. ಪ್ರೋಸಿಜರ್ ಪ್ರಕಾರ ತನಿಖೆ ಆಗಲಿ. ನಾನೂ ಇದರ ಬಗ್ಗೆ ಯಾರ ಬಳಿಯು ಮಾತನಾಡಿಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES