Saturday, December 28, 2024

ಲೈಂಗಿಕ ದೌರ್ಜನ್ಯ ಆರೋಪ : ಸೀರಿಯಲ್​ ನಟ ಚರಿತ್​ ಬಾಳಪ್ಪ ಅರೆಸ್ಟ್​ !

ಬೆಂಗಳೂರು : ಕನ್ನಡದ ಜನಪ್ರಿಯ ಧಾರವಾಹಿ ಮುದ್ದುಲಕ್ಷ್ಮಿ‌ ಸೇರಿದಂತೆ ಅನೇಕ ಸೀರಿಯಲ್​ನಲ್ಲಿ ನಟಿಸಿರುವ ನಟ ಚರಿತ್ ಭಾಳಪ್ಪ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದ್ದು. ತನ್ನ ಸ್ನೇಹಿತೆಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಇದೀಗ ಪೊಲೀಸರು ನಟನನ್ನು ಬಂಧಿಸಿದ್ದಾರೆ.

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಪ್ರಸಾರವಾಗುವ ಧಾರವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ನಟ ಚರಿಬತ್​. ತನಗೆ ಪರಿಚಯವಾಗಿದ್ದ ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಪ್ರೀತಿಸುತ್ತೇನೆ ಎಂದು ಗೆಳತಿಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ ಆರೋಪಿ. ಯುವತಿ ವಾಸಿಸುತ್ತಿದ್ದ ಮನೆಗೆ ನುಗ್ಗಿ ಕಿರುಕುಳ ನೀಡಿದ ಆರೋಪವಿದೆ.

ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಆರೋಪ : ಸೀರಿಯಲ್​ ನಟ ಚರಿತ್​ ಬಾಳಪ್ಪನನ್ನು ಬಂಧಿಸಿದ ಪೊಲೀಸರು !

ಅಷ್ಟೆ ಅಲ್ಲದೆ ಹಣಕ್ಕೂ ಭೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಯುವತಿಯ ಖಾಸಗಿ ಪೋಟೋ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಒಡ್ದಿದ್ದಾನೆ. ಇದರಿಂದ ಬೇಸತ್ತಿದ್ದ ಯುವತಿ ಆರ್​.ಆರ್​ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ, ಹಲ್ಲೆ ಮಾಡಿರೋ ಮಾಡಿದ್ದಾರೆ.

ಈಗಾಗಲೇ ಪತ್ನಿಯಿಂದ ಡೈವೊರ್ಸ್ ಪಡೆದಿರುವ ನಟ ಚರಿತ್​ ವಿರುದ್ದ ಮಾಜಿ ಪತ್ನಿ ಮಂಜುಶ್ರೀ ಕೂಡ ಸರ್ಜಾಪುರ ಪೊಲೀಸ್​ ಠಾಣೆಯಲ್ಲಿ ಕಳೆದ ಜುಲೈನಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರ್​.ಆರ್​ ನಗರ ಪೊಲೀಸರು ನಟನನ್ನು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES