ದೆಹಲಿ : ಆರ್ಥಿಕ ಉದಾರೀಕರಣದ ಹರಿಕಾರ, ಮಹಾನ್ ಆರ್ಥಿಕ ತಜ್ಞ, ಪ್ರಾಮಾಣಿಕ ರಾಜಕಾರಣಿ, ಸಜ್ಜನ ಧುರೀಣ, ಆರ್ಥಿಕ ಸುಧಾರಣೆಗಳ ಜನಕ, ಮಿತಭಾಷಿ, ವಿನಮ್ರತೆಯ ಸಾಕಾರ ಮೂರ್ತಿ, ಮಹಾನ್ ಮೇಧಾವಿ ಮನಮೋಹನ್ ಸಿಂಗ್ ಅವರು ಗುರುವಾರ ಇಹಲೋಕ ತ್ಯಜಿಸಿದ್ದಾರೆ.
ಇಂದು ಅವರ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು. ಅವರ ಕುಟುಂಬಕ್ಕೆ ಸಾತ್ವಾಂನ ಹೇಳಿದರು. ಈ ವೇಳೆ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ,ಪಿ ನಡ್ಡಾ, ಸೇರಿದಂತೆ ಅನೇಕ ಸಚಿವ ಸಂಪುಟದ ಸಚಿವರುಗಳು ಮನಮೋಹನ್ ಸಿಂಗ್ರ ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ: ಖ್ಯಾತ ಆರ್ಥಿಕ ತಜ್ಙನ ನಿಧನಕ್ಕೆ ಕಂಬನಿ ಮಿಡಿದ ಅಮೇರಿಕಾ !
ನಾಳೆ ದೆಹಲಿಯ ರಾಜ್ಘಾಟ್ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮನಮೋಹನ್ ಸಿಂಗ್ರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮಾಹಿತಿ ದೊರೆತಿದೆ.