ಮೈಸೂರು : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನಲೆ. ರಾಷ್ಟ್ರದಾದ್ಯಂತ 7 ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ. ಇದರ ಹಿನ್ನಲೆಯಲ್ಲಿ ಮೈಸೂರು ಅರಮನೆಯಲ್ಲಿ ನಡೆಯುತ್ತಿದ್ದ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಮಾಹಿತಿ ದೊರೆತಿದೆ.
ಪ್ರತಿ ಭಾರಿಯಂತೆ ಈ ಬಾರಿಯೂ ಅರಮನೆ ನಗರಿ ಹೊಸವರ್ಷದ ಆಗಮನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಆದರೆ ದುರಾದೃಷ್ಟವಶಾತ್ ಭಾರತದ ಅರ್ಥ ಶಾಸ್ತ್ರಜ್ಙ ಮನಮೋಹನ್ ಸಿಂಗ್ ಅವರು ವಿಧಿವಶವಾದ ಹಿನ್ನಲೆ 7 ದಿನಗಳ ಕಾಲ ಶೋಕಚರಣೆಯನ್ನು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : ಇನ್ಶೂರೆನ್ಸ್ ಹಣಕ್ಕೆ ತಂದೆಯನ್ನೆ ಕೊಲೆ ಮಾಡಿದ ಪಾಪಿ ಮಗ !
ಇಂದು ಮತ್ತು ನಾಳೆ ಮೈಸೂರು ಅರಮನೆಯಲ್ಲಿ ನಡೆಯುತ್ತಿದ್ದ ಲೈಟ್ ಶೋ ಕೂಡ ರದ್ದಾಗಿದ್ದು. ಫಲಪುಷ್ಪ ಪ್ರದರ್ಶನ ಎಂದಿನಂತೆ ನಡೆಯಲಿದೆ. ಡಿಸೆಂಬರ್ 31ರ ರಾತ್ರಿ ಅರಮನೆ ಆಡಳಿತ ಮಂಡಳಿ ವತಿಯಿಂದ ನಡೆಯುತ್ತಿದ್ದ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದ್ದು. ಬಾಣ ಬಿರುಸು, ಪಟಾಕಿ ಸಿಡಿಸುವುದು, ಪೊಲೀಸ್ ಬ್ಯಾಂಡ್ ಈ ರೀತಿಯ ಎಲ್ಲಾ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ.
ಕೇವಲ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ನಡೆಯುತ್ತಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದ್ದು. ಬೆಳಗಾವಿಯಲ್ಲಿ ನಡೆಯುತ್ತಿದ್ದ ಗಾಂಧಿ ಭಾರತ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.