ನವದೆಹಲಿ: ಭಾರತದ ಮಾಜಿ ಪ್ರಧಾನಿ, ನವ ಭಾರತದ ಆರ್ಥಿಕತೆಯ ಸುಧಾರಕ, ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ಕೊನೆಯುಸಿರೆಳೆದಿದ್ದಾರೆ. ದೇಶವನ್ನು ವಿಶ್ವಮಟ್ಟದಲ್ಲಿ ತಲೆಯೆತ್ತುವಂತೆ ಮಾಡಿದ್ದ ಮನಮೋಹನ್ ಸಿಂಗ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಸೇವೆಯಿಂದ ಭಾರತ ಆರ್ಥಿಕತೆಯಲ್ಲಿ ಇಂದು ಜಗತ್ತಿನ ಮುಂದೆ ಎದೆಯುಬ್ಬಿಸಿ ನಿಂತಿದೆ.
ಸತತ ಎರಡು ಅವಧಿಗೆ ಭಾರತದ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರು ತಮ್ಮ ಸಮಯದಲ್ಲಿ ದೇಶ ಎದುರಿಸಿದ ಆರ್ಥಿಕ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಆದರೆ ಅವರ ಆಡಳಿತದ ವೇಳೆ ಅವರು ಹೆಚ್ಚು ಟೀಕೆಗಳನ್ನು ಎದುರಿಸಿದರು.
ಇದನ್ನೂ ಓದಿ : ವಿಲೀಂಗ್ ಮಾಡುವ ವೇಳೆ ಅಪಘಾತ : ಇಬ್ಬರು ಯುವಕರು ಸ್ಥಳದಲ್ಲೆ ಸಾ*ವು !
ಹೆಚ್ಚು ಮಾತನಾಡದ ಮನಮೋಹನ ಸಿಂಗ್ ಅವರು ಸೋನಿಯಾ ಗಾಂಧಿಯವರ ಕೈಗೊಂಬೆಯಾಗಿದ್ದಾರೆ. ಮೌನ ಮೋಹನ ಸಿಂಗ್ ಈ ರೀತಿಯಾಗಿ ಅನೇಕ ಟೀಕೆಗಳಿಗೆ ಗುರಿಯಾಗಿದ್ದರು. ಅವೆಲ್ಲದರ ನಡುವೆ ಅವರ ಅಧಿಕಾರವದಿಯಲ್ಲಿ ಕೆಲ ನಾಯಕರಿಂದ ಆದ ಭ್ರಷ್ಟಚಾರ ಮನಮೋಹನಸಿಂಗ್ ಅವರ ಹೆಸರಿಗೆ ಕಪ್ಪುಮಸಿ ಬಳಿಯಿತು. ಇದರ ಪರಿಣಾಮವಾಗಿಯೇ ಭ್ರಷ್ಟಚಾರ ಮುಕ್ತ ಭಾರತ ಅಭಿಯಾನದ ಪರಿಣಾಮವಾಗಿ 2014ರಲ್ಲಿ UPA ನೇತೃತ್ವದ ಕಾಂಗ್ರೆಸ್ ಸರ್ಕಾರ ಸೋಲನುಭವಿಸಿ ಕೇಂದ್ರದಲ್ಲಿ ಮೋದಿ ನೇತೃತ್ವದ NDA ಸರ್ಕಾರ ಅಧಿಕಾರ ಹಿಡಿಯಿತು.
ಅಧಿಕಾರ ಕಳೆದುಕೊಂಡ ಮನಮೋಹನ್ ಸಿಂಗ್ ಅವರು ಅಂದು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತ ‘ಇಂದು ಸಂಸತ್ತಿನಲ್ಲಿ ಮಾಧ್ಯಮಗಳು ಅಥವಾ ಪ್ರತಿಪಕ್ಷಗಳು ನನ್ನ ಬಗ್ಗೆ ಏನು ಬೇಕಾದರೂ ಹೇಳಲಿ, ಆದರೆ ಇತಿಹಾಸವು ನನಗೆ ನ್ಯಾಯವನ್ನು ನೀಡುತ್ತದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ.’ ಇದಲ್ಲದೆ ಭಾರತ ಸರ್ಕಾರದ ಕ್ಯಾಬಿನೆಟ್‌ನಲ್ಲಿ ನಡೆಯುವ ಎಲ್ಲವನ್ನೂ ನಾನು ಬಹಿರಂಗಪಡಿಸಲಾರೆ ಎಂದು ಹೇಳಿದ್ದರು.
ಆ ಮಾತು ಇಂದು ನಿಜವಾಗಿದ್ದು. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಎಲ್ಲರು ನೆನಪಿಸಿಕೊಳ್ಳುತ್ತಿದ್ದಾರೆ.