ಆರೋಪಿಗಳಾದ ನಯನಾ, ಜಯರಾಜು, ಸಂತೋಷ
ಬೆಂಗಳೂರು : ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಹನಿಟ್ರ್ಯಾಪ್ ಜಾಲವನ್ನು ಭೇದಿಸಿದ್ದು. ಹನಿಟ್ರ್ಯಾಪ್ಗೆ ಒಳಗಾದ ಕಂಟ್ರ್ಯಾಕ್ಟರ್ ಓರ್ವ ಚಿನ್ನ, ಹಣ ಸೇರಿದಂತೆ ತನ್ನ ಮೈಮೇಲಿನ ಬಟ್ಟೆಯನ್ನು ಕಳೆದುಕೊಂಡಿದ್ದಾನೆ.
21ರ ಯುವತಿ ಸಿಕ್ಳು ಎಂದು ನಂಬಿ 57 ವರ್ಷದ ಅಂಕಲ್ ಒಬ್ಬ ಹನಿಟ್ರ್ಯಾಪ್ಗೆ ಒಳಗಾಗಿದ್ದಾನೆ. ಸಿವಿಲ್ ಕಾಂಟ್ರಕ್ಟರ್ ಆಗಿದ್ದ ಅಂಕಲ್ಗೆ ಸ್ನೇಹಿತನೊಬ್ಬನ ಮೂಲಕ ನಯನಾ ಎಂಬ ಯುವತಿ ಪರಿಚಯವಾಗಿದ್ದಳು. ಪರಿಚಯವಾದ ಮೇಲೆ ಪ್ರತಿದಿನ ಕರೆ ಮಾಡಿ ಅಂಕಲ್ ಜೊತೆಗೆ ನಯನಾ ಮಾತನಾಡುತ್ತಿದ್ದಳು. ಡಿಸೆಂಬರ್ 09ರಂದು ಯುವತಿ ಟೀ ಕುಡಿಯಲು ಅಂಕಲ್ನ್ನು ಮನೆಗೆ ಕರೆದಿದ್ದಳು.
ಇದನ್ನೂ ಓದಿ : ಮನಮೋಹನ್ ಸಿಂಗ್ ನಿಧನ ಹಿನ್ನಲೆ : ಹೊಸವರ್ಷಾಚರಣೆ ಕಾರ್ಯಕ್ರಮ ರದ್ದು !
ಯುವತಿಯ ಕರೆಗೆ ಓಗೊಟ್ಟ ಅಂಕಲ್ ಯುವತಿಯ ಮನೆಗೆ ಹೋಗಿದ್ದನು. ಈ ವೇಳೆ ಪೂರ್ವ ನಿಯೋಜಿತಾ ಯೋಜನೆಯಂತೆ ನಕಲಿ ಪೊಲೀಸ್ ವೇಶದಲ್ಲಿ ಈ ಗ್ಯಾಂಗ್ ಮನೆಗೆ ಎಂಟ್ರಿ ಕೊಟ್ಟಿದೆ. ಪೊಲೀಸ್ ವೇಶದಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದ ಆರೋಪಿಗಳು ವ್ಯಭಿಚಾರ ನಡೆಸುತ್ತಿದ್ದಿರಾ, ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಈ ವೇಳೆ ಅಂಕಲ್ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಬಟ್ಟೆಯನ್ನು ಬಿಚ್ಚಿಸಿ ನಗ್ನ ಪೋಟೋ ತೆಗೆದುಕೊಂಡಿದ್ದರು. ನಂತರ ಸ್ಟೇಶನ್ಗೆ ಹೋಗೋದು ಬೇಡ ಎಂದರೆ ಇಲ್ಲೆ ಸೆಟಲ್ ಮಾಡ್ಕೋ ಎಂದಿದ್ದ ಆರೋಪಿಗಳು. ಅಂಕಲ್ ಬಳಿಯಲ್ಲಿ 29 ಸಾವಿರ ನಗದು, 26 ಸಾವಿರ ಹಣವನ್ನು ಪೋನ್ ಪೇನಲ್ಲಿ ಕಳಿಸಿಕೊಂಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು 5 ಲಕ್ಷ ಮೌಲ್ಯದ ಚಿನ್ನವನ್ನು ಪಡೆದಿದು ಎಸ್ಕೇಪ್ ಆಗಿದ್ದರು.
ಇದನ್ನೂ ಓದಿ : ವಾಯುಭಾರ ಕುಸಿತ : ಮುಂದಿನ ಐದು ದಿನ ಸಿಲಿಕಾನ್ ಸಿಟಿಗೆ ಮಳೆ ಸಾಧ್ಯತೆ !
ನಂತರ ಅಂಕಲ್ ಯುವತಿಗೆ ಇವರ ವಿರುದ್ದ ದೂರು ಕೊಡೋಣ ಎಂದು ಹೇಳಿದ್ದನು. ಆದರೆ ಈ ವೇಳೆ ತಪ್ಪಿಸಿಕೊಳ್ಳಲು ಹೊಸ ವರಸೆ ತೆಗೆದಿದ್ದ ಯುವತಿ. ಸ್ಟೇಷನ್ಗೆ ಕಂಪ್ಲೇಟ್ ಕೊಟ್ಟರೆ, ಮಗು ಕರೆದುಕೊಂಡು ನಿಮ್ಮ ಮನೆಗೆ ಬರುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದಳು. ಇದರಿಂದ ಹೆದರಿದ್ದ ಅಂಕಲ್ ಕಂಪ್ಲೇಟ್ ಕೊಡದೆ ಸುಮ್ಮನಿದ್ದನು
ನಂತರ ತಾನೇ ಧೈರ್ಯಮಾಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಸಂತ್ರಸ್ಥ ಅಂಕಲ್ ದೂರು ನೀಡಿದ್ದು. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಸಂತೋಶ್, ಅಜಯ್, ಜಯರಾಜ್ ಎಂಬುವವರನ್ನು ಬಂಧಿಸಿದ್ದಾರೆ. ಇನ್ನು ಯುವತಿ ನಯನಾ ತಲೆ ಮರಿಸಿಕೊಂಡಿದ್ದು. ಆಕೆಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಮಾಹಿತಿ ದೊರೆತಿದೆ.