ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು. ಅವರ ನಿಧನಕ್ಕೆ ಭಾರತ ಸೇರಿದಂತೆ ವಿಶ್ವದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ವೇಳೆ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮನಮೋಹನ್ ಸಿಂಗ್ ಅವರ ಬಗ್ಗೆ ಹೇಳಿದ್ದ ಮಾತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.
ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದರು. ಆ ವೇಳೆ, ಅಂದರೆ 2008ರಲ್ಲಿ, ಅಮೆರಿಕದಲ್ಲಿ ಮಹಾನ್ ಆರ್ಥಿಕ ಕುಸಿತ ಸಂಭವಿಸಿತ್ತು. ಅದರ ಪರಿಣಾಮ ಭಾರತದ ಮೇಲೂ ಆಗಿತ್ತು. ಆದರೆ ಭಾರತಕ್ಕೆ ಹೆಚ್ಚು ನಷ್ಟವಾಗದಂತೆ ಮನಮೋಹನ್ ಸಿಂಗ್ ತೆಗೆದುಕೊಂಡ ಕ್ರಮ ಒಬಾಮಾ ಅವರನ್ನು ಆಶ್ಚರ್ಯಚಕಿತರನ್ನಾಗಿಸಿತ್ತು.
ಇದನ್ನೂ ಓದಿ : ಮನಮೋಹನ ಸಿಂಗ್ರ ಅಂತಿಮ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ !
ಒಬಾಮಾ ಜೊತೆಗೆ ಐತಿಹಾಸಿಕ ಭಾರತ-ಅಮೆರಿಕ ಅಣು ಒಪ್ಪಂದ ಮಾಡಿಕೊಳ್ಳುವಲ್ಲಿ ಮನಮೋಹನ ಸಿಂಗ್ ಯಶಸ್ವಿಯಾಗಿದ್ದರು. ಈ ಮೂಲಕ ಇಬ್ಬರಲ್ಲೂ ವೈಯಕ್ತಿಕ ಬಾಂಧವ್ಯ ಬೆಳೆದಿತ್ತು. ಈ ಒಪ್ಪಂದವು 2008 ರಲ್ಲಿ ಜಾರಿಗೆ ಬಂತು. ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಕೆಲವರ ಆರಂಭಿಕ ಅಸಮ್ಮತಿಯ ನಡುವೆ ಮನಮೋಹನ್ ಸಿಂಗ್ ಇದನ್ನು ಸಮರ್ಥವಾಗಿ ನಿಭಾಯಿಸಿದ್ದರು. ಈ ಒಪ್ಪಂದವು 1998 ರ ಪೋಖ್ರಾನ್ 2 ಪರಮಾಣು ಪರೀಕ್ಷೆಗಳ ನಂತರ ಭಾಗಶಃ ನಿರ್ಬಂಧಗಳೊಂದಿಗೆ ಭಾರತದ ಮೇಲೆ ವಿಧಿಸಲಾದ ನಿರ್ಬಂಧಗಳ ಯುಗವನ್ನು ಕೊನೆಗೊಳಿಸಿತು.
ಇದನ್ನೂ ಓದಿ : ಖ್ಯಾತ ಆರ್ಥಿಕ ತಜ್ಙನ ನಿಧನಕ್ಕೆ ಕಂಬನಿ ಮಿಡಿದ ಅಮೇರಿಕಾ !
ಮನಮೋಹನ್ ಸಿಂಗ್ ಅವರು ಜಗತ್ತಿನಲ್ಲಿಯೆ ಶ್ರೇಷ್ಟ ಆರ್ಥಿಕ ತಜ್ಙರಲ್ಲಿನ ಒಬ್ಬರು ಎಂದಿದ್ದ ಬರಾಕ್ ಒಬಾಮ. ಒಂದು ಸಮಾರಂಭದಲ್ಲಿ ಮಾತನಾಡುವಾಗ ‘ ನಾನು ಮನಮೋಹನ್ ಸಿಂಗ್ರ ದೊಡ್ಡ ಅಭಿಮಾನಿ. ಅವರು ಭಾರತದ ಆರ್ಥಿಕತೆಗೆ ಅಡಿಪಾಯ ಹಾಕಿದವರು ಎಂದು ಹೊಗಳಿದ್ದರು.