Saturday, December 28, 2024

ಭೀಷ್ಮ ಶಪಥ ಕೈಗೊಂಡ ಅಣ್ಣಮಲೈ : ಚಪ್ಪಲಿ ಹಾಕಲ್ಲ, ಛಾಟಿ ಏಟಿನಿಂದ ಹೊಡೆದುಕೊಂಡಿದ್ದೇಕೆ?

ಕೊಯಮತ್ತೂರು : ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಭೀಷ್ಮ ಶಪತ ಕೈಗೊಂಡಿದ್ದು. ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಕೈಗೊಂಡಿದ್ದು. ಇಂದು ಬೆಳಿಗ್ಗೆ ಅವರ ನಿವಾಸದ ಮುಂದೆ ಛಾಟಿಯಿಂದ ಹೊಡೆದುಕೊಂಡು ತಮಗೆ ತಾವೇ ನೋವು ಮಾಡಿಕೊಂಡಿದ್ದಾರೆ.

ಅಣ್ಣಮಲೈ ನಿರ್ಧಾರಕ್ಕೆ ಕಾರಣವೇನು?

ಅಣ್ಣಾ ಯೂನಿರ್ವಸಿಟಿಯಲ್ಲಿ ಓದುತ್ತಿದ್ದ ಇಂಜಿನಿಯರಿಂಗ್​ ವಿಧ್ಯಾರ್ಥಿನಿಯ ಮೇಲೆ ಕಾಲೇಜು ಕ್ಯಾಂಪಸ್​ನಲ್ಲಿಯೆ ಅತ್ಯಾಚಾರವಾಗಿದ್ದು. ಇದರ ವಿರುದ್ದ ವಿಧ್ಯಾರ್ಥಿನಿ ಪೊಲೀಸರಿಗೆ ದೂರನ್ನು ನೀಡಿದ್ದರು. ಪೊಲೀಸರು 37 ವರ್ಷದ ಜ್ಞಾನಶೇಖರನ್​ ಎಂಬ ಶಂಕಿತ ಆರೋಪಿಯನ್ನು ಬಂಧಿಸಿದ್ದರು. ಈತ ಯುವತಿಯ ಖಾಸಗಿ ವಿಡೀಯೋ ಚಿತ್ರಿಕರಿಸಿಕೊಂಡು ಬ್ಲಾಕ್​ಮೇಲ್​ ಮಾಡಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದನು ಎಂಬ ಆರೋಪವಿದೆ.

ಆದರೆ ಇದೆ ಆರೋಪಿಯ ಮೇಲೆ 2011ರಲ್ಲಿಯೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು. ಈತನ ವಿರುದ್ದ ಸುಮಾರು 15 ಕ್ರಿಮಿನಲ್​ ಪ್ರಕರಣ ದಾಖಲಾಗಿದೆ. ಆದರೂ ಈ ಆರೋಪಿ ಸ್ವತಂತ್ರ್ಯವಾಗಿ ಓಡಾಡುತ್ತಿದ್ದಾನೆ. ಡಿಎಂಕೆ ಸರ್ಕಾರದ ಆಡಳಿತದಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಇಲ್ಲ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ : ನಾನು ಮನಮೋಹನ್​ ಸಿಂಗ್​ರ ದೊಡ್ಡ ಅಭಿಮಾನಿ ಎಂದಿದ್ದ ಬರಾಕ್​ ಒಬಾಮ !

ಇದರ ಬೆನ್ನಲ್ಲೆ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದಿರುವ ಅಣ್ಣಮಲೈ ಭೀಷ್ಮ ಶಪಥ ಕೈಗೊಂಡಿದ್ದು. ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ನಾನು ಕಾಲಿಗೆ ಚಪ್ಪಲಿ ಧರಿಸಲ್ಲ ಎಂದು ಶಪಥ ಮಾಡಿದ್ದಾರೆ. ಇಷ್ಟೆ ಅಲ್ಲದೆ ಕೊಯಮತ್ತೂರಿನ ತಮ್ಮ ನಿವಾಸದ ಬಳಿಯಲ್ಲಿ ತಮಗೆ ತಾವೇ ಛಾಟಿಯಿಂದ ಹೊಡೆದುಕೊಂಡು ಸರ್ಕಾರದ ವಿರುದ್ದ ಪ್ರತಿಭಟಿಸಿದ್ದಾರೆ.

ಜೊತೆಗೆ 48 ದಿನಗಳ ಸುದೀರ್ಘ ಉಪವಾಸ ಕೈಗೊಂಡಿರುವ ಅಣ್ಣಮಲೈ, ಮುರುಗನ್​ ದೇವರ ಆರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಕಳೆದ ವಾರವಷ್ಟೆ ಕೊಯಮತ್ತೂರು ಬಾಂಬ್​ ಬ್ಲಾಸ್ಟ್​ನ ಅಪರಾದಿ ಎ.ಬಾಷ ಅಂತಿಮ ಯಾತ್ರೆಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ಅಣ್ಣಮಲೈ ನೇತೃತ್ವದ ಬಿಜೆಪಿ ಸರ್ಕಾರ ಪ್ರತಿಭಟನೆ ನಡೆಸಿತ್ತು. ಈ ವೇಳೆ ಅಣ್ಣಮಲೈರನ್ನು ಪೊಲೀಸರು ಬಂಧಿಸಿದ್ದರು.

RELATED ARTICLES

Related Articles

TRENDING ARTICLES