ಪಾಟ್ನಾ: ಬಿಹಾರದ ವೈಶಾಲಿಯಲ್ಲಿ 30 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು 15 ವರ್ಷದ ಅಪ್ರಾಪ್ತ ಬಾಲಕನನ್ನು ಮದುವೆಯಾಗಿದ್ದು. ಈ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ ನಾವಿಬ್ಬರು ಪ್ರೀತಿಸುತ್ತಿದ್ದೆವೆ, ಅದರಲ್ಲಿ ತಪ್ಪೇನು ಎಂದು ವರದಿಗಾರರಿಗೆ ಪ್ರಶ್ನಿಸಿದ್ದಾಳೆ ಎಂದು ತಿಳಿದು ಬಂದಿದೆ..
ಹೌದು ಬಿಹಾರದ ವೈಶಾಲಿಯಲ್ಲಿ ಈ ಘಟನೆ ನಡೆದಿದ್ದು. ಸೀಮಾ ಎಂಬ 30 ವರ್ಷದ ಮಹಿಳೆ 15 ವರ್ಷದ ಅಪ್ರಾಪ್ತ ಬಾಲಕನನ್ನು ವಿವಾಹವಾಗಿದ್ದಾಳೆ. ಇದಕ್ಕೆ ಸಾಮಾಜಿಕವಾಗಿ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು. ತೀವ್ರ ಟೀಕೆಗಳು ಕೇಳಿ ಬರುತ್ತಿವೆ. ಇದರ ಬಗ್ಗೆ ಮಹಿಳೆ ಬಳಿಯಲ್ಲಿ ಕೇಳಿದಾಗ ಪ್ರತಿಕ್ರಿಯೆ ನೀಡಿರುವ ಮಹಿಳೆ ‘ನಾವಿಬ್ಬರು ಪ್ರೀತಿಸುತ್ತಿದ್ದೇವೆ, ಅದಕ್ಕೆ ಮದುವೆಯಾಗಿದ್ದೇವೆ, ಅದರಲ್ಲಿ ತಪ್ಪೇನಿದೆ’ ಎಂದು ಮರು ಪ್ರಶ್ನೆ ಕೇಳಿದ್ದಾಳೆ.
ಇದನ್ನೂ ಓದಿ : ಮುಂಬೈ ದಾಳಿಯ ಪ್ರಮುಖ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿ ಹೃದಯಘಾತದಿಂದ ಸಾ*ವು !
ಇನ್ನು ಈಕೆ ಮದುವೆಯಾಗಿರುವ ಹುಡುಗ 7 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಯೂಟ್ಯೂಬರ್ ಒಬ್ಬರ ಸಂದರ್ಶನ ವೇಳೆ ಬಾಲಕ ಸೀಮಾಗೆ ಮಾವನಾಗಬೇಕು ಎಂದು ತಿಳಿದು ಬಂದಿದೆ. ಈ ವೇಳೆ ಮಾತನಾಡಿರುವ ಮಹಿಳೆ ‘ಆತನನ್ನು ಸಣ್ಣ ಮಗುವಿದ್ದಾಗಿನಿಂದಲೂ ಪ್ರೀತಿಸುತ್ತಿದ್ದಿದ್ದಾಗಿ ಹೇಳಿದ್ದಾರೆ. ಅಲ್ಲದೇ ತನ್ನ ಹಾಲಿ ಗಂಡ ತನ್ನನ್ನು ಪ್ರೀತಿಸುತ್ತಿಲ್ಲ, ಹೀಗಾಗಿಯೇ ಆತನನ್ನು ಬಿಟ್ಟು ಈ ಸಣ್ಣ ಹುಡುಗನನ್ನು ಮದ್ವೆಯಾಗಿದ್ದಾಗಿ ಹೇಳಿದ್ದಾಳೆ. ಅಲ್ಲದೇ ಈ ಹುಡುಗನನ್ನು ಮದ್ವೆಯಾಗಲು ಮನೆ ಬಿಟ್ಟು ಓಡಿ ಬಂದಿದ್ದಾಗಿಯೂ ಆಕೆ ಹೇಳಿದ್ದಾಳೆ.
ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು. ಆ ಮಹಿಳೆಯ ಜಾಗದಲ್ಲಿ ಬೇರೆ ಯುವಕನಿದ್ದರೆ ಈ ವೇಳೆಗೆ ಆತ ಕಂಬಿ ಹಿಂದೆ ಇರಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ಮಕ್ಕಳಿರುವ ಮಹಿಳೆ ಈ ರೀತಿ ಮಾಡಲು ನಾಚಿಕೆ ಆಗಲಿಲ್ಲವೆ ಎಂದು ಕೆಲವರು ಪ್ರಶ್ನಿಸಿದ್ದಾರೆ.