ಶಿವಮೊಗ್ಗ: ಸಾವನ್ನಪ್ಪಿದ ನವಜಾತ ಶಿಶುವನ್ನು ಆಸ್ಪತ್ರೆಯ ಶೌಚಾಲಯದಲ್ಲಿ ಬಿಟ್ಟು ಹೋಗಿರುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದ್ದು. ನಾಸೀಮ ಎಂಬ ಮಹಿಳೆಯಿಂದ ಕೃತ್ಯ ನಡೆದಿದೆ ಎಂದು ಮಾಹಿತಿ ದೊರೆತಿದೆ.
ಕಳೆದ ತಿಂಗಳು ರಾಮನಗರದ ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಆಗ ತಾನೆ ಜನಿಸಿದ್ದ ಮಗುವನ್ನು ಶೌಚಾಲಯದ ಕಮೋಡ್ಗೆ ಹಾಕಿ ಫ್ಲೇಶ್ ಮಾಡಿದ್ದ ಘಟನೆ ಮಾಸುವ ಮುನ್ನವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಇದನ್ನೂ ಓದಿ : ಬಿಮ್ಸ್ ಆಸ್ಪತ್ರೆಯಲ್ಲಿ ಮತೋರ್ವ ಬಾಣಂತಿ ಸಾವು : ಪಿಡ್ಸ್ ಬಂದು ಸಾವನ್ನಪ್ಪಿದ್ದಾರೆ ಎಂದ ವೈದ್ಯರು !
ಹೊಟ್ಟನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಯಿಂದ ಕೃತ್ಯ ನಡೆದಿದ್ದು. ಸಾವನ್ನಪ್ಪಿದ ಮಗುವನ್ನು ಆಸ್ಪತ್ರೆಯ ಶೌಚಾಲಯದಲ್ಲಿ ಬಿಟ್ಟು ಹೋಗಿದ್ದಾರೆ. ಶಿವಮೊಗ್ಗದ ಹಕ್ಕಿಪಿಕ್ಕಿ ಕ್ಯಾಂಪ್ನಲ್ಲಿದ್ದ ನಜೀಮ ಎಂಬ ಮಹಿಳೆಯಿಂದ ಕೃತ್ಯ ನಡೆದಿದ್ದು. ಮಗುವನ್ನು ಶೌಚಾಲಯದಲ್ಲಿಟ್ಟ ನಂತರ ಮಹಿಳೆ ಆಸ್ಪತ್ರೆಯೆ ಕೇಸ್ ಶೀಟ್ ತೆಗೆದುಕೊಂಡು ಹೋಗಿದ್ದಾಳೆ. ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.