ಬೆಂಗಳೂರು : ರೈಲ್ವೆ ಟ್ರ್ಯಾಕ್ ಸಿಲುಕಿ ಇಬ್ಬರು ಯುವಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಕೆ.ಪಿ ಅಗ್ರಗಾರದಲ್ಲಿ ನಡೆದಿದ್ದು. ಮೃತರನ್ನು ಬಿನ್ನಿಪೇಟೆಯ ಸೂರ್ಯ ಮತ್ತು ಶರತ್ ಎಂದು ಗುರುತಿಸಲಾಗಿದೆ.
ನೆನ್ನೆ (ಡಿ.25) ರಾತ್ರಿ 10:30ರ ಸುಮಾರಿಗೆ ಇಬ್ಬರು ಯುವಕರು ಕೆ.ಪಿ ಅಗ್ರಹಾರದ ಬಳಿಯಲ್ಲಿರುವ ರೈಲ್ವೆ ಗೇಟ್ಬಳಿ. ರೈಲ್ವೆ ಟ್ರ್ಯಾಕ್ ಮೇಲೆ ಕುಳಿತಿದ್ದರು. ಈ ವೇಳೆ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಯುವಕರ ಕಾಲುಗಳು ಮುರಿದಿದ್ದು. ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಇದನ್ನೂಓದಿ : ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾ*ವು !
ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಘಟನೆ ಅತ್ಯಂತ ದುರದೃಷ್ಟಕರವಾಗಿದೆ ಎಂದು ಹೇಳಬಹುದು.