ಹುಬ್ಬಳ್ಳಿ : ಸಿಲಿಂಡರ್ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಮಾಲಾಧಾರಿಗಳು ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು. ಇದರಿಂದ ಬೇಸರಗೊಂಡ ಮತ್ತೊಬ್ಬ ಮಾಲಾಧಾರಿ ಅಯ್ಯಪ್ಪ ಸ್ವಾಮಿ ಮಾಲೆಯನ್ನು ತೆಗೆದು ಕಣ್ಣೀರಾಕಿದ್ದಾರೆ.‘
ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಾಲಯದಲ್ಲಿ ಸಿಲಿಂಡರ್ ಸ್ಪೋಟಗೊಂಡು 9 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಬೆಂಕಿಯ ಕೆನ್ನಾಲಿಗೆ ಇಂದ ತೀವ್ರವಾಗಿ ಗಾಯಗೊಂಡಿದ್ದರು. ಇವರೆಲ್ಲರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ತಡರಾತ್ರಿ ಇಬ್ಬರು ಮಾಲಾಧಾರಿಗಳು ಸಾವನ್ನಪ್ಪಿದ್ದಾರೆ. ಮೃತರನ್ನು 65 ವರ್ಷದ ನಿಂಗಪ್ಪ ಮಲ್ಲಪ್ಪ ಬೇಪೂರು, 30 ವರ್ಷದ ಸಂಜಯ ಪ್ರಕಾಶ್ ಸವದತ್ತಿ ಎಂಬುವವರು ಮೃತಪಟ್ಟಿದ್ದಾರೆ.
ಉಳಿದ 6 ಜನ ಮಾಲಾಧಾರಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದ್ದು. ಒರ್ವ ಮಾಲಾಧಾರಿ ಗುಣಮುಖರಾಗಿ ಸಾಮಾನ್ಯ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದೆ.
ಧರಿಸಿದ್ದ ಮಾಲೆಯನ್ನು ತೆಗೆದು ಕಣ್ಣೀರಾಕಿದ ಸ್ನೇಹಿತ !
ನಿಜಲಿಂಗಪ್ಪ ಬೇಪೂರು, ಸಂಜಯ್ ಸವದತ್ತಿ ಇಬ್ಬರು ಚಿಕೆತ್ಸೆ ಫಲಿಸದೇ ಸಾವಿಗೀಡಾದ ಹಿನ್ನಲೆಯಲ್ಲಿ ಬೇಸರಗೊಂಡ ಮಂಜುನಾಥ್ ಎಂಬುವವರು ಅಯ್ಯಪ್ಪ ಸ್ವಾಮಿ ಮಾಲೆಯನ್ನು ತೆಗೆದಿದ್ದಾರೆ. ತುಂಬಾ ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯ ಸೇವೆ ಮಾಡಿದೆವು. ಆದರೆ ನಡೆದ ದುರ್ಘಟನೆಯಿಂದ ತುಂಬಾ ಬೇಸರವಾಗಿದೆ. ಉಳಿದ 7 ಜನರನ್ನು ಉಳಿಸಿಕೊಡು ಎಂದು ಸ್ವಾಮಿ ಸನ್ನಿದಿಯಲ್ಲಿ ಪ್ರಾಥನೆ ಮಾಡಿದ್ದೇವೆ. ಅವು ಬದುಕಿದರೆ ಮುಂದೆ ಮಾಲೆ ಹಾಕುತ್ತೇನೆ. ಎಂದು ಮಂಜುನಾಥ್ ಕಣ್ಣೀರು ಹಾಕಿದರು.