Monday, January 27, 2025

ಮಾರುಕಟ್ಟೆಗೆ ಲಗ್ಗೆಇಟ್ಟ ನಂದಿನಿ ಇಡ್ಲಿ-ದೋಸೆ ಹಿಟ್ಟು : ಕೆಎಂಎಫ್​ನಿಂದ ಅಧಿಕೃತ ಹೇಳಿಕೆ !

ಬೆಂಗಳೂರು: ಕೆಎಂಎಫ್​ನಿಂದ ಬಹುನಿರೀಕ್ಷಿತ ಪ್ರಾಡೆಕ್ಟ್​ ಇಡ್ಲಿ-ದೋಸೆ ಹಿಟ್ಟು ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು. ಇದರ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ‌ ನಾಯ್ಕ್ ಹಾಗೂ ಎಂಡಿ ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ಇದರ ಬಗ್ಗೆ ಮಾತನಾಡಿದ ಕೆಎಂಎಫ್​ ಅಧ್ಯಕ್ಷ ಭೀಮನಾಯಕ್​ ‘ ಬಹಳ ದಿನದಿಂದ ದೋಸೆ ಇಡ್ಲಿ ಹಿಟ್ಟು ಯಾವಾಗ ಬಿಡುಗಡೆ ಆಗುತ್ತೆ ಅಂತ ಚರ್ಚೆ ಆಗ್ತಾ ಇತ್ತು. ಆದರೆ ನೆನ್ನೆ ಸಿಎಂ ಅವರಿಂದ ಬಿಡುಗಡೆಯಾಗಿದೆ. ಇಂದಿನಿಂದ ಇಡ್ಲಿ-ದೋಸೆ ಹಿಟ್ಟು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಿದರು. ಸದ್ಯ ಬೆಂಗಳೂರಲ್ಲಿ ಮಾತ್ರ ಲಭ್ಯವಾಗಲಿದ್ದು. ನಮ್ಮ ಪ್ರಾಡೆಕ್ಟ್​ ಮಾರುಕಟ್ಟೆಯ 20ರಷ್ಟು ಪಾಲನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಪ್ರತಿ ನಿತ್ಯ 5 ಸಾವಿರ ಮೆಟ್ರಿಕ್​ ಟನ್​ನಷ್ಟು ಮಾರಾಟ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್​ ಬ್ಯಾನರ್​ನಲ್ಲಿ POK ನಾಪತ್ತೆ : ಟ್ವಿಟ್​​ ಮಾಡಿ ಆಕ್ರೋಶ ವ್ಯಕ್ತಪಡಿಸದ ರಾಜ್ಯ ಬಿಜೆಪಿ !

ಮಾರುಕಟ್ಟೆಯ ಎಲ್ಲಾ ಕಂಪನಿಗಳ ಜೊತೆ ಕಾಂಪಿಟ್​ ಮಾಡುತ್ತೇವೆ !

ನಂದಿನಿ ಇಡ್ಲಿ-ದೋಸೆ ಹಿಟ್ಟಿನ 450ಗ್ರಾಂ ಪ್ಯಾಕೆಟ್​ಗೆ 40ರೂಪಾಯಿ ಹಾಗೂ 900ಗ್ರಾಂಗೆ 80 ರೂಪಾಯಿ ಫಿಕ್ಸ್ ಮಾಡಲಾಗಿದೆ ಎಂದು ತಿಳಿಸಿದ ಭೀಮಾ ನಾಯಕ್​. ಇದರಲ್ಲಿ ವೇ ಪ್ರೋಟಿನ್​ ಆ್ಯಡ್​ ಮಾಡಿದ್ದೀವಿ. ಇದರಿಂದ ಮಕ್ಳಳು ಸೇರಿದಂತೆ ಎಲ್ಲಾ ವಯಸ್ಸಿನವರಿಗೆ , ಜಿಮ್​ ಹಾಗೂ ಕ್ರೀಡಾಪಟುಗಳಿಗೆ ಸಹಾಯವಾಗಲಿದೆ. ಇದರಲ್ಲಿ  ಶೇಕಡಾ 5ರಷ್ಟು ಪ್ರೋಟಿನ್​ ಆ್ಯಡ್​ ಮಾಡಿದ್ದೇವೆ.

ಕೇವಲ ಬೆಂಗಳೂರು ಅಲ್ಲದೆ ಬೇರೆ ಜಿಲ್ಲೆಗಳಲ್ಲಿಯೂ ಮಾರಟ ಮಾಡುತ್ತೇವೆ. ಭೇಡಿಕೆ ಹೇಗೆ ಬರುತ್ತೋ ಆ ರೀತಿಯಾಗಿ ನಿರ್ಧಾರ ಮಾಡುತ್ತೇವೆ. ನೂರಕ್ಕೆ ನೂರು ನಾವು ಮಾರುಕಟ್ಟೆಯಲ್ಲಿರುವ ಕಂಪನಿಗಳ ಜೊತೆ ಕಾಂಪೀಟೇಷನ್​ ಮಾಡ್ತೀವಿ. ಒಂದು ವರ್ಷದೊಳಗೆ ಎರಡು ಕಂಪನಿಗಳಿಗಿಂತ ಮುನ್ನುಗ್ಗುತ್ತೀವಿ ಎಂದು ಹೇಳಿದರು.

 

RELATED ARTICLES

Related Articles

TRENDING ARTICLES