ಬೆಂಗಳೂರು : ಮುನಿರತ್ನಗೆ ಮೊಟ್ಟೆ ಹೊಡೆದ ಪ್ರಕರಣ ವಿಚಾರವಾಗಿ ಮಾತನಾಡಿದ ಲಗ್ಗೆರೆ ನಾರಯಣ ಸ್ವಾಮಿ ‘ನಿನ್ನೆ ಮೊಟ್ಟೆ ಹೊಡೆದ ಕಾರ್ಯಕ್ರಮದ ಡ್ರೈರೆಕ್ಟರ್ , ಪ್ರೋಡ್ಯೂಸರ್, ಹಾಗೂ ಆ್ಯಕ್ಟರ್ ಎಲ್ಲವೂ ಮುನಿರತ್ನನದೆ. ತಲೆಗೆ ಏಟು ಬಿದ್ದಿದೆ ಎಂದು ಕೆ.ಸಿ ಜನರಲ್ ಹೆರಿಗೆ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಹಾಗಿದ್ದಾರೆ ಎಂದು ಲಗ್ಗೆರೆ ನಾರಯಣ ಸ್ವಾಮಿ ಮುನಿರತ್ನನ ಮೇಲೆ ವಾಗ್ದಾಳಿ ನಡೆಸಿದರು.
ಮಾಧ್ಯಮದ ಜೊತೆ ಮಾತನಾಡಿದ ಲಗ್ಗೆರೆ ನಾರಯಣ ಸ್ವಾಮಿ ‘ ಮುನಿರತ್ನ ಭಾಗಿಯಾಗಿದ್ದ ಕಾರ್ಯಕ್ರಮವನ್ನು ವಿರೋಧಿಸಲು ನಮ್ಮ ಸಮುದಾಯದ ಮಹಿಳೆಯರು ಹೋಗಿದ್ದರು. ಆದರೆ ನಂತರ ಪೊಲೀಸರು ಅವರನ್ನು ವಾಪಾಸ್ ಕಳುಹಿಸಿದ್ದರು. ಅದಾದ ನಂತರ ಮುನಿಗೆ ಮೊಟ್ಟೆ ಏಟು ಬಿದ್ದಿದೆ. ಆ್ಯಸಿಡ್ ಆ್ಯಸಿಡ್ ಎಂದ ಕೂಡಲೆ ಅವರ ತಲೆಗೆ ಮೊಟ್ಟೆ ಬಿದ್ದಿದೆ. ತಲೆ ಮುಂಬಾಗಕ್ಕೆ ಮೊಟ್ಟ ಬಿದ್ದಿದೆ, ಆದರೆ ತಲೆ ಹಿಂಬಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ ಎಂದು ಹೇಳುತ್ತಾರೆ. ಅದಕ್ಕೆ ಸಿ.ಟಿ ಸ್ಕ್ಯಾನ್ ಮಾಡಿಸಬೇಕು ಎಂದು ಹೇಳುತ್ತಾರೆ.
ಇದನ್ನೂ ಓದಿ : ದಚ್ಚು-ಕಿಚ್ಚನ ನಡುವೆ ಕಿಚ್ಚು ಹಚ್ಚಿದ ಕೇಕ್ !
ತಲೆಗೆ ಏಟು ಬಿದ್ದ ಮುನಿರತ್ನ ಕೆ.ಸಿ ಜನರಲ್ ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ಅಡ್ಮಿಟ್ ಆಗಿದ್ದಾರೆ. ಆ್ಯಸಿಡ್ ದಾಳಿ ಆಗಿದೆ ಎಂದು ಮುನಿರತ್ನ ಹೇಳಿದ್ದಾರೆ. ಆದರೆ ಅವರ ಜೊತೆಗೆ ಸಾಕಷ್ಟು ಜನ ಇದ್ದರು. ಅವರಿಗೆ ಏನು ಹಾಗಿಲ್ಲ. ಮುನಿರತ್ನ ಅಮಾಯಕರ ಕೊಲೆಗೆ ಪ್ರಯತ್ನ ಪಟ್ಟಿದ್ದಾನೆ, ಆದರೆ ಅವರ ಮೇಲೆ ಯಾಕೆ ಯಾವುದೇ ಕ್ರಮ ಆಗಿಲ್ಲ. ಆದರೆ ಮುನಿರತ್ನ ನಮ್ಮ ಜನಾಂಗದ ಮಹಿಳೆಯರ ಮೇಲೆ ಕೆಟ್ಟದಾಗಿ ಮಾತನಾಡಿದ್ದಾನೆ. ಅವನ ವಿರುದ್ದ ನಾವು ನೇರವಾಗಿ ಹೋರಾಟ ಮಾಡುತ್ತೇವೆ. ಅವನಿಗೆ ಮೊಟ್ಟೆ ಹೊಡಯಬೇಕಿಲ್ಲ ಎಂದು ಹೇಳಿದರು.