ಬೆಳಗಾವಿ : ರಾಜ್ಯದಲ್ಲಿ ಬಾಣಂತಿಯರ ಮಾರಣ ಹೋಮ ಮುಂದಿವರಿದಿದ್ದು. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಬಾಣಂತಿಯನ್ನು ಪೂಜಾ ಅಡಿವೆಪ್ಪ ಖಡಕಬಾವಿ ಎಂದು ಗುರುತಿಸಲಾಗಿದೆ.
ಬೆಳಗಾವಿ ಜಿಲ್ಲೆಯ, ಗೋಕಾಕ್ ತಾಲೂಕಿನ, ಕುಂದರಗಿ ಗ್ರಾಮದ ನಿವಾಸಿಯಾಗಿದ್ದ 25 ವರ್ಷದ ಪೂಜಾ ಅಡಿವೆಪ್ಪ ಖಡಕಬಾವಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. ನಿನ್ನೆ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಇಂದು ಸಾವನ್ನಪ್ಪಿದ್ದು. ವೈದ್ಯರು ಪಿಡ್ಸ್ ಬಂದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಮೃತ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನು ನಡೆಸದ ವೈದ್ಯರು ತರಾತುರಿಯಲ್ಲಿ ಶವ ಕೊಟ್ಟು ಕಳಿಸಿದ್ದಾರೆ. ಮಗಳನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ :
ನಮ್ಮದು ಯಾವುದೇ ನಿರ್ಲಕ್ಷವಿಲ್ಲ ಎಂದ ಬಿಮ್ಸ್ ವೈದ್ಯ !
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣದ ಕುರಿತು ಹೇಳಿಕೆ ನೀಡಿದ ವೈದ್ಯ ಡಾ. ವಸಂತ್ ಕಬ್ಭೂರು ಹೇಳಿಕೆ ನೀಡಿದ್ದು. ‘ಡಿಸೆಂಬರ್ 24ರಂದು ಪೂಜಾ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಈಗಾಗಲೆ ಮೂರು ಮಕ್ಕಳಾಗಿದ್ದು. ಒಂದು ಬಾರಿ ಆಪರೇಷನ್ ಕೂಡ ಆಗಿದೆ. ಮಹಿಳೆ ಆಸ್ಪತ್ರೆಗೆ ದಾಖಲಾದ ವೇಳೆಯೆ ಆಕೆಗೆ ಪ್ರಜ್ಞೆ ಇರಲಿಲ್ಲ. ಕೂಡಲೆ ಆಕೆಯನ್ನು ಐಸಿಯುಗೆ ಶಿಫ್ಟ್ ಮಾಡಿದೆವು.
ದೇಹ ಪರಿಶೀಲನೆ ನಡೆಸಿದಾಗ ಮಹಿಳೆಯ ಹಾರ್ಟ್ ವೀಕ್ ಇದೆ ಎಂದು ತಿಳಿದು ಬಂದಿತ್ತು. ಆದರೆ ಹೆರಿಗೆ ಆದ ಮೇಲೆ ಪಂಪಿಂಗ್ ಸರಿಯಾಗಿ ಆಗದೆ ಪೂಜಾ ಮೃತಪಟ್ಟಿದ್ದಾರೆ. ಜನಿಸಿರುವ ಮದು 1.6 ಕೆಜಿ ತೂಕವಿದ್ದು. ಮಗುವಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಇದರಲ್ಲಿ ನಮ್ಮದು ಯಾವುದೇ ನಿರ್ಲಕ್ಷವಿಲ್ಲ ಎಂದು ವೈದ್ಯರು ತಮಗೆ ತಾವೇ ಕ್ಲೀನ್ಚಿಟ್ ಕೊಟ್ಟುಕೊಂಡಿದ್ದಾರೆ.