Wednesday, December 25, 2024

ದೇವರ ಆಶೀರ್ವಾದ & ಎಲ್ಲರ ಹಾರೈಕೆಯಿಂದ ಶಿವಣ್ಣನಿಗೆ ಮಾಡಿದ ಸರ್ಜರಿ ಯಶಸ್ವಿ : ಅಮೇರಿಕಾದ ವೈದ್ಯರು!

ಫ್ಲೋರಿಡಾ : ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ಗೆ ಅಮೇರಿಕಾದ ಮಿಯಾಮಿಯಲ್ಲಿ ನಡೆದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು. ದೇವರ ಆರೈಕೆ ಮತ್ತು ಅಭಿಮಾನಿಗಳ ಹಾರೈಕೆಯಿಂದ ಶಿವಣ್ಣನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ವರದಿ ನೀಡಿದ್ದಾರೆ.

ಕಳೆದ ವಾರವಷ್ಟೆ ನಟ ಶಿವರಾಜ್​ಕುಮಾರ್ ಅಮೇರಿಕಾಗೆ ಪ್ರಯಾಣ ಬೆಳೆಸಿದ್ದರು. ನೆನ್ನೆ ರಾತ್ರಿ ಭಾರತೀಯ ಕಾಲಮಾನ 10 ಗಂಟೆಗೆ ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು. ಇದರ ಬಗ್ಗೆ ಅಮೇರಿಕಾದ ವೈದ್ಯರು ವಿಡಿಯೋ ಸಂದೇಶ ಮಾಡಿ ಶಿವಣ್ಣನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ರಾಜಧಾನಿಯಲ್ಲಿ ಮಿತಿ ಮೀರಿದ ಚಪ್ಪಲಿ ಕಳ್ಳರ ಹಾವಳಿ : ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿ !

ವಿಡಿಯೋದಲ್ಲಿ ಮಾತನಾಡಿರುವ ವೈದ್ಯ ಡಾ. ಮುರಗೇಶ್​ ‘ ದೇವರ ಆರ್ಶಿವಾದ ಮತ್ತು ಎಲ್ಲರ ಆರೈಕೆಯಿಂದ ಶಿವಣ್ಣನ ಸರ್ಜರಿ ಯಶಸ್ವಿಯಾಗಿದೆ. ಶಿವರಾಜ್​ಕುಮಾರ್​ ಸರ್ಜರಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದು ಅಮೇರಿಕಾದ ಮಿಯಾಮಿ ಕ್ಯಾನ್ಸರ್​ ಇನ್ಸ್ಟಟ್ಯೂಟ್​ ವೈದ್ಯರಿಂದ ಮಾಹಿತಿ ದೊರೆತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಜನವರಿಯ ಅಂತ್ಯದಲ್ಲಿ ಶಿವಣ್ಣ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES