Tuesday, January 28, 2025

ರಾಜಧಾನಿಯಲ್ಲಿ ಮಿತಿ ಮೀರಿದ ಚಪ್ಪಲಿ ಕಳ್ಳರ ಹಾವಳಿ : ಪೊಲೀಸ್​ ಠಾಣೆಯಲ್ಲಿ ದೂರು ದಾಖಲು !

ಬೆಂಗಳೂರು : ಸಾಮಾನ್ಯವಾಗಿ ನಾವು ಚಿನ್ನ, ಹಣ, ಮೊಬೈಲ್​ಗಳನ್ನು ಕಳ್ಳತನ ಮಾಡುವ ಕಳ್ಳರನ್ನು  ನೋಡಿದ್ದೇವೆ. ಆದರೆ ಬೆಂಗಳೂರಿನ ಈ ಏರಿಯಾದಲ್ಲಿರುವ ಜನ ಚಪ್ಪಲಿ ಕಳ್ಳರ ಹಾವಳಿಯಿಂದ ಬೇಸತ್ತು, ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ, ಬೃಂದಾವನ ಲೇಔಟ್ ನಲ್ಲಿ ಘಟನೆ ನಡೆದಿದ್ದು. ಒಂದೇ ದಿನ ಏರಿಯಾದ ಎರಡ-ಮೂರು ಮನೆಗಳಲ್ಲಿ ಚಪ್ಪಲಿ ಕಳ್ಳತನ ಮಾಡಿದ್ದಾರೆ. ಇದೇ ತಿಂಗಳ ಡಿಸೆಂಬರ್ 22 ಹಾಗೂ 23ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು. ನರಸಿಂಹಮೂರ್ತಿ ಎಂಬುವವರ ಮನೆಯ ಕಾಂಪೌಂಡ್​ ಹಾರಿ ಬಂದಿರುವ ಕಳ್ಳರು ಚಪ್ಪಲಿ ಕದಿಯಲು ಪ್ರಯತ್ನಿಸಿದ್ದಾರೆ.

ಆದರೆ ಮನೆಗೆ ಗ್ರಿಲ್​ ಇದ್ದ ಕಾರಣ ಚಪ್ಪಲಿ ಕದಿಯಲು ಸಾಧ್ಯವಾಗದೆ ಖದೀಮರು ತೆರಳಿದ್ದಾರೆ. ಮತ್ತೊಂದೆಡೆ ಖದೀಮರು ಚಪ್ಪಲಿಯನ್ನು ಚೀಲದಲ್ಲಿ ತುಂಬಿಕೊಂಡು ಹೋಗುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳರ ಎಂಟ್ರಿಯಿಂದ ಏರಿಯಾದ ಜನರು ಭಯಭೀತರಾಗಿದ್ದು. ತಮ್ಮ ಏರಿಯಾದಲ್ಲಿ ಪೊಲೀಸರು ಬೀಟ್​ ಮಾಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES