Tuesday, September 2, 2025
HomeUncategorizedಸಿದ್ದರಾಮಯ್ಯ ಮೈಸೂರಿನ ಸುಪುತ್ರ, ಮೈಸೂರಿಗೆ ಅವರ ಕೊಡುಗೆ ಬಹಳ ಇದೆ : ಪ್ರತಾಪ್​ ಸಿಂಹ !

ಸಿದ್ದರಾಮಯ್ಯ ಮೈಸೂರಿನ ಸುಪುತ್ರ, ಮೈಸೂರಿಗೆ ಅವರ ಕೊಡುಗೆ ಬಹಳ ಇದೆ : ಪ್ರತಾಪ್​ ಸಿಂಹ !

ಮೈಸೂರು : ಮೈಸೂರಿನ ಕೆಆರ್​ಎಸ್​. ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ರಸ್ತೆ ಎಂದು ನಾಮಕಾರಣ ಮಾಡಲು ಮುಂದಾಗಿರುವ ವಿಚಾರವಾಗಿ ಮಾತನಾಡಿದ ಮಾಜಿ ಸಂಸದ ಪ್ರತಾಪ್​ ಸಿಂಹ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದು. ಸಿಎಂ ಪರ ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರತಾಪ್​ ಸಿಂಹ ‘ ಸಿದ್ದರಾಮಯ್ಯ ಮೈಸೂರಿನ ಸುಪುತ್ರ, ಅವರನ್ನು ಸೈದ್ದಾಂತಿಕವಾಗಿ ವಿರೋಧಿಸುತ್ತೇನೆ, ಆದರೆ ಅವರ ವಿಚಾರವನ್ನು ವಿರೋದ ಮಾಡಲ್ಲ. ಸ್ಪಷ್ಟ ಬಹುಮತದ ಜೊತೆ ಸಿದ್ದರಾಮಯ್ಯ, ಸಿಎಂ ಆಗಿದ್ದಾರೆ. ಮೈಸೂರಿಗೆ ಅವರ ಕೊಡುಗೆ ಬಹಳಷ್ಟಿದೆ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಿದ್ದು, ರಾಜಪಥ ಮಾಡಿಸಿದ್ದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ : ವಿಮಾನ ಪತನ ದುರಂತ : 70 ಕ್ಕೂ ಅಧಿಕ ಪ್ರಯಾಣಿಕರು ಸಾವು !

ಸಿದ್ದರಾಮಯ್ಯ 40 ವರ್ಷದ ಹಿಂದೆಯೆ ವಿಧಾನಸಭೆಗೆ ಹೋಗಿದ್ದಾರೆ. ಅವರ ಹೆಸರನ್ನು ರಸ್ತೆಗೆ ಇಡುವುದರಲ್ಲಿ ಯಾವುದೇ ತಪ್ಪಿಲ್ಲ. ಇಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸಕ್ಕೆ ಯಾರು ಕೈ ಹಾಕಬಾರದು. ಸಾಧಕರು ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲ. ಎಲ್ಲಾ ಪಕ್ಷದಲ್ಲೂ ಇದ್ದಾರೆ. ಸಿದ್ದರಾಮಯ್ಯ ಅವರ ಹೆಸರನ್ನು ಇಡುವ ವಿಚಾರದಲ್ಲಿ ಪಕ್ಷಭೇದ ಮಾಡಬೇಡಿ. ಸಣ್ಣತನ ತೋರಿಸಬೇಡಿ.

ಮೈಸೂರಿನಲ್ಲಿ ಮಹರಾಜರ ಹೆಸರನ್ನು ಎಲ್ಲಾ ಕಡೆ ಇಟ್ಟಿದ್ದಾರೆ. ಮಹರಾಜರ ನಂತರವು ಅನೇಕ ಸಾಧಕರು ಮೈಸೂರಿನಲ್ಲಿ ಬಂದಿದ್ದಾರೆ. ವಿಶ್ವೇಶ್ವರಯ್ಯ ಇರದಿದ್ದರೆ ಕನ್ನಂಬಾಡಿ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಮಿರ್ಜಾ ಇಸ್ಮಾಯಿಲ್​ ಇರದಿದ್ದರೆ ಬೆಂಗಳೂರಿಗೆ ಕರೆಂಟ್​ ತೆಗೆದುಕೊಂಡು ಹೋಗಲು ಆಗುತ್ತಿರಲಿಲ್ಲ.  ದಿವಾನರುಗಳು ಕೂಡ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ, ಅವರಿಗೆ ಇನ್ನು ಹೆಚ್ಚಿನ ಗೌರವ ದೊರಕಬೇಕು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments