Sunday, January 26, 2025

ವಿಮಾನ ಪತನ ದುರಂತ : 42ಕ್ಕೂ ಅಧಿಕ ಪ್ರಯಾಣಿಕರು ಸಾವು !

ಕಝಾಕಿಸ್ತಾನ್​ : ಬುಧವಾರ ಕಝಾಕಿಸ್ತಾನದ ಅಕ್ಟೋವ್​ ವಿಮಾನ ನಿಲ್ದಾಣದ ಬಳಿ 100 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ತುರ್ತು ಭೂಸ್ಪರ್ಶ ಮಾಡುವಾಗ ಪತನಗೊಂಡಿದ್ದು ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಕಝಾಕಿಸ್ತಾನ್​ ಆರೋಗ್ಯ ಸಚಿವಾಲಯದ ಪ್ರಕಾರ, ಅಪಘಾತದಲ್ಲಿ ಆರು ಜನರು ಬದುಕುಳಿದ್ದಿದ್ದು. ಬಹುತೇಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.

ಇದನ್ನು ಓದಿ : 23 ವರ್ಷಗಳ ಹಿಂದೆ ಮನೆ ತೊರೆದ ಮಹಿಳೆ ವಾಪಾಸ್​ : ಮನೆಗೆ ಕರೆಸಿ ಸನ್ಮಾನಿಸಿದ ಸಚಿವ ಮಹದೇವಪ್ಪ !

ಅಜರ್‌ಬೈಜಾನ್ ಏರ್‌ಲೈನ್ಸ್ ಫ್ಲೈಟ್ J2-8243 ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು, ಆದರೆ ಮಂಜಿನಿಂದಾಗಿ ಮಾರ್ಗವನ್ನು ಬದಲಾಯಿಸಲಾಯಿತು ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ. ಕಝಕಿಸ್ತಾನ್​ ಮಾಧ್ಯಮಗಳ ಪ್ರಕಾರ,  ವಿಮಾನದಲ್ಲಿ 105 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES