Monday, January 27, 2025

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ : 46ಕ್ಕೂ ಹೆಚ್ಚು ನಾಗರಿಕರ ಸಾ*ವು !

ಇಸ್ಲಾಮಾಬಾದ್ : ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಪ್ರಕಾರ, ಪಾಕಿಸ್ತಾನಿ ಮಿಲಿಟರಿ ಮಂಗಳವಾರ ತಡರಾತ್ರಿ ನೆರೆಯ ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿದೆ.

ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಥವಾ ಮಿಲಿಟರಿ ಮಾಧ್ಯಮ ವಿಭಾಗ, ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲವಾದರೂ, ಪಾಕಿಸ್ತಾನದ ದಕ್ಷಿಣ ವಜಿರಿಸ್ತಾನ್ ಬುಡಕಟ್ಟು ಜಿಲ್ಲೆಯ ಸಮೀಪವಿರುವ ಅಫ್ಘಾನಿಸ್ತಾನದ ಬರ್ಮಾಲ್ ಜಿಲ್ಲೆಯಲ್ಲಿ ಈ ದಾಳಿಗಳು ಸಂಭವಿಸಿವೆ ಎಂದು ಮೂಲಗಳು ದೃಡಪಡಿಸಿದೆ.

ಇದನ್ನೂ ಓದಿ :1500 ಅಡಿ ಕಂದಕಕ್ಕೆ ಉರುಳಿ ಬಿದ್ದ ಬಸ್​ : 3 ಸಾವು, 24 ಜನರಿಗೆ ಗಂಭೀರ ಗಾಯ !

ಪಾಕಿಸ್ತಾನ ನಡೆಸಿದ ಈ ದಾಳಿಯಲ್ಲಿ ಅಪ್ಘಾನಿಸ್ತಾನದ ಸುಮಾರು 46 ನಾಗರಿಕರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್​ ಸರ್ಕಾರ ಮಾಹಿತಿ ಹಂಚಿಕೊಂಡಿದ್ದು. ಮೃತರ ಪೈಕಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು ಎಂದು ಮಾಹಿತಿ ದೊರೆತಿದೆ. ಇದರ ಬಗ್ಗೆ ಪಾಕ್​ ಸರ್ಕಾರ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಪಾಕ್​ ಭದ್ರತಾ ಅಧಿಕಾರಿಯೊಬ್ಬರು ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಮಾಡಿದ ದಾಳಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES