ಬೆಂಗಳೂರು : ಏಡ್ಸ್ ಟ್ರ್ಯಾಪ್ ಶಾಸಕ ಮುನಿರತ್ನನಿಗೆ ಇಂದು ಬೆಳಿಗ್ಗೆ ಮೊಟ್ಟೆ ಏಟು ಬಿದ್ದಿದ್ದು. ಇದರ ಬೆನ್ನಲ್ಲೆ ಶಾಸಕ ಮುನಿರತ್ನ ನಗರದ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನೇಕ ಬಿಜೆಪಿ ನಾಯಕರು ಮುನಿರತ್ನನನ್ನು ಭೇಟಿಯಾಗಿದ್ದು. ಸಂಸದ ಡಾ. ಮಂಜುನಾಥ್ ಭೇಟಿಯಾಗಿ ತಪಾಸಣೆ ನಡೆಸಿದ್ದಾರೆ.
ಮುನಿರತ್ನ ಭೇಟಿಯಾಗಿ ಬಂದು ಮಾತನಾಡಿದ ಸಂಸದ ಮಂಜುನಾಥ್ ‘ ನಾನು ಅವರನ್ನು ಭೇಟಿ ಮಾಡಿದೆ. ನಾನೇ ಅವರನ್ನು ತಪಾಸಣೆ ನಡೆಸಿದ್ದೇನೆ. ಅವರ ತಲೆಗೆ ಪೆಟ್ಟು ಬಿದ್ದು. ವಾಂತಿಯಾಗುವ ಅನುಭವವಾಗುತ್ತಿದೆ. ಅವರ ತಲೆಗೆ ಪೆಟ್ಟು ಬಿದ್ದ ಜಾಗದಲ್ಲಿ ಕೂದಲು ಬರ್ನಿಂಗ್ ಆಗಿದೆ. ಇದಕ್ಕೆ ಸಂಬಂಧ ಪಟ್ಟ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ : ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ : 46ಕ್ಕೂ ಹೆಚ್ಚು ನಾಗರಿಕರ ಸಾ*ವು !
ರಾಜಕೀಯದಲ್ಲಿ ಹೀಗೆಲ್ಲಾ ಆಗಬಾರದು, ಚುನವಣೆಯಲ್ಲಿ ಸೋಲು, ಗೆಲುವು ಅನ್ನೋದು ಸಾಮಾನ್ಯ. ಆದರೆ ಅದನ್ನೆ ಇಟ್ಟಿಕೊಂಡು ರಾಜಕಾರಣವನ್ನು ಯಾರೂ ಮಾಡಬಾರದು. ನಡೆದಿರುವ ಘಟನೆ ಬಗ್ಗೆ ಆಸ್ಪತ್ರೆಯಿಂದ ಹೊರಬಂದ ಮೇಲೆ ದೂರು ನೀಡಲಿದ್ದಾರೆ.