Monday, January 27, 2025

ಕಾರುಗಳ ನಡುವೆ ಭೀಕರ ಅಪಘಾತ : ನಾಲ್ವರು ಸಾ*ವು !

ಹಾವೇರಿ : ಕಾರುಗಳ ನಡುವೆ ಅಪಘಾತವಾಗಿ ನಾಲ್ಕು ಜನರು ಮೃತಪಟ್ಟಿರುವ ಘಟನೆ ಹಾವೇರಿಯಲ್ಲಿ ನಡೆದಿದ್ದು. ಮೃತರ ಶವಗಳನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಹಾವೇರಿ ಜಿಲ್ಲೆಯ, ತಡಸ ಬಳಿಯ ತಿಮ್ಮಾಪುರ ಗ್ರಾಮದಲ್ಲಿ ಭೀಕರ ಅಪಘಾತವಾಗಿದ್ದು. ಹುಬ್ಬಳ್ಳಿಯಿಂದ ದಾವಣಗೆರೆಗೆ ಹೋಗುತ್ತಿದ್ದ ಆಲ್ಟೋ ಕಾರು ಮತ್ತು ಮಹೀಂದ್ರ ಕಾರಿನ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ನಾಲ್ಕು ಜನರು ಮೃತಪಟ್ಟಿದ್ದು. ಬೆಂಗಳೂರು ಮೂಲದ ಚಂದ್ರಮ್ಮ (59) ಹಾಗೂ ಹರಿಹರದ ಮೀನಾ (38), ಮಹೇಶ್ ಕುಮಾರ್ ಸಿ (41) ಹಾಗೂ ಧನವೀರ (11) ಮೃತ ದುರ್ದವೈ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಏಡ್ಸ್​ ಟ್ರಾಪ್​ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ : ಕೊಲೆ ಯತ್ನದ ಆರೋಪ ಮಾಡಿದ ಶಾಸಕ !

ಅಪಘಾತದ ನಂತರ ಮಹೀಂದ್ರ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು, ಅಪಘಾತ ಮಾಡಿದ ಕಾರು ಮಹರಾಷ್ಟ್ರದ ಕೊಲ್ಲಾಪುರಕ್ಕೆ ಸೇರಿದೆ ಎಂಬ ಮಾಹಿತಿ ದೊರೆತಿದೆ. ಮೃತರ ಶವಗಳನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

RELATED ARTICLES

Related Articles

TRENDING ARTICLES