Sunday, January 26, 2025

ಏಡ್ಸ್​ ಟ್ರಾಪ್​ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ : ಕೊಲೆ ಯತ್ನದ ಆರೋಪ ಮಾಡಿದ ಶಾಸಕ !

ಬೆಂಗಳೂರು : ಏಡ್ಸ್​ ಟ್ರಾಪ್​ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದಿದ್ದು. ಇದರ ಬಗ್ಗೆ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ ಶಾಸಕ ಮುನಿರತ್ನ ‘ನನ್ನ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಡಿ,ಕೆ ಶಿವಕುಮಾರ್​, ಡಿ.ಕೆ ಸುರೇಶ್, ಕುಸುಮಾ ವಿರುದ್ದ ಕೊಲೆ ಯತ್ನದ ಗಂಭೀರ ಆರೋಪ ಮಾಡಿದ್ದಾರೆ.

ಮೊಟ್ಟೆಯಿಂದ ದಾಳಿಗೊಳಗಾದ ನಂತರ ಮಾತನಾಡಿದ ಶಾಸಕ ಮುನಿರತ್ನ ‘ ನನ್ನನ್ನು ಗುಂಪು ಗೂಡಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇದಕ್ಕೆ ಗೃಹ ಮಂತ್ರಿಗಳು ಉತ್ತರ ಕೊಡಬೇಕು. ಡಿವೈಎಸ್​ಪಿ. ಧರ್ಮೆಂದ್ರ ಅವರು ನನ್ನ ಮೇಲೆ ಪೋಕ್ಸೋ ಕೇಸ್​ ಹಾಕಲು ತಯಾರಿ ನಡೆಸುತ್ತಿದ್ದಾರೆ. ನಾನು ರಾಜೀನಾಮೆ ಕೊಟ್ಟು ಕುಸುಮಾರನ್ನು ಮಿನಿಸ್ಟರ್​ ಮಾಡಬೇಕು ಎಂದು ನನ್ನನ್ನು ಹೆದರಿಸುತ್ತಿದ್ದಾರೆ. ನಾನು ಹೆಣ್ಣಿಂದ ಕೊಲೆಯಾಗುತ್ತೇನೆ. ಅದು ಕುಸುಮಾ ಅವರಿಂದ ಎಂದು ಹೇಳಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಮೈಸೂರಿನ ಸುಪುತ್ರ, ಮೈಸೂರಿಗೆ ಅವರ ಕೊಡುಗೆ ಬಹಳ ಇದೆ : ಪ್ರತಾಪ್​ ಸಿಂಹ !

ಮೊಟ್ಟೆ ಎಸೆತದ ಹಿಂದಿದೆಯ ಕಾಣದ ಕೈಗಳ ಕೈವಾಡ ?

ಮುನಿರತ್ನನ ಮೇಲೆ ಮೊಟ್ಟೆ ಎಸೆತದ ಎಕ್ಷ್​ಕ್ಲೂಸಿವ್​ ವಿಡೀಯೋ ಪವರ್ ಟಿವಿಗೆ ಲಭ್ಯವಾಗಿದ್ದು. ಅದರಲ್ಲಿ ಮೊಟ್ಟೆ ಎಸೆಯುವ ಮುನ್ನವೆ, ಆಘಂತುಕನೊಬ್ಬ ಆ್ಯಸಿಡ್​ ದಾಳಿ ಎಂದು ಹೇಳಿದ್ದಾನೆ. ಇದರಿಂದಾಗಿ ಈ ಮೊಟ್ಟೆ ಎಸೆತದ ಹಿಂದೆ ಪೂರ್ವನಿಯೋಜಿತ ಯೋಜನೆ ಇದೆಯ ಎಂದು ಅನುಮಾನ ಮೂಡಿಸಿದೆ.

RELATED ARTICLES

Related Articles

TRENDING ARTICLES