Monday, January 27, 2025

ಸಿಲಿಂಡರ್​ ಬ್ಲಾಸ್ಟ್​​ : ತಾಯಿ, ಇಬ್ಬರು ಮಕ್ಕಳಿಗೆ ಗಂಭೀರ ಗಾಯ !

ಬೆಂಗಳೂರು : ಸಿಲಿಂಡರ್​ ಬ್ಲಾಸ್ಟ್​ ಆದ ಕಾರಣ ತಾಯಿ ಸೇರಿದಂತೆ ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ತಮಿಳು ನಾಡಿನ ಮೂಲದವರಾದ ಮುನಿಯಮ್ಮ ದಂಪತಿ ಮತ್ತು ಮಕ್ಕಳು ಸುಮಾರು 6 ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಇಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮುನಿಯಮ್ಮನ ಮಗ ಅಭಿಷೇಕ್​ ಪಿಯುಸಿ ಓದುತ್ತಿದ್ದನು, ಮಗಳು ನಂದಿನಿ 10ನೇ ತರಗತಿಯಲ್ಲಿ ಓದುತ್ತಿದ್ದಳು.

ಇದನ್ನೂ ಓದಿ : ಸಿ.ಟಿ ರವಿ ಬಂಧನ ಪ್ರಕರಣ : ಖಾನಾಪುರ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್​ ಸಸ್ಪೆಂಡ್​ !

ಇಂದು ಎಂದಿನಂತೆ ಏಳು ಗಂಟೆಗೆ ಎದ್ದ ಮುನಿಯಮ್ಮ ಮನೆಯ ಲೈಟ್​ ಹಾಕಿದಾಗ ಸಿಲಿಂಡರ್​ ಬ್ಲಾಸ್ಟ್​ ಆಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಮನೆಯ ಬಾಗಶಃ ಭಾಗ ಸುಟ್ಟು ಹೋಗಿದೆ. ಮನೆಯಲ್ಲಿದ್ದ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.  ಸದ್ಯ ಮೂವರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ಶ್ರೀ ರಾಂಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES