Monday, January 27, 2025

ಸಿ.ಟಿ ರವಿ ಬಂಧನ ಪ್ರಕರಣ : ಖಾನಾಪುರ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್​ ಸಸ್ಪೆಂಡ್​ !

ಬೆಳಗಾವಿ : ವಿಧಾನ ಪರಿಷತ್​ ಸದಸ್ಯ ಸಿ,ಟಿ ರವಿಯನ್ನು ಬಂಧಿಸಿದ್ದ ಪ್ರಕರಣದಲ್ಲಿ ಪೊಲೀಸ್​ ಇಲಾಖೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದು. ಖಾನಾಪುರ ಪೊಲೀಸ್​ ಇನ್ಸ್​ಪೆಕ್ಟರ್​ ಮಂಜುನಾಥ್​​ ನಾಯಕ್​ರನ್ನು ಅಮಾನತು ಮಾಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಸಚಿವೆ ಲಕ್ಷ್ಮೀ ಹೆಬ್ಬಳ್ಕರ್​ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದ ಪ್ರಕರಣದಲ್ಲಿ ಖಾನಾಪುರ ಪೊಲೀಸರು ಸಿ,ಟಿ ರವಿಯನ್ನು ವಶಕ್ಕೆ ಪಡೆದಿದ್ದರು. ಇದೀಗ ಇದೆ ಪ್ರಕರಣದ ಕಾರಣಕ್ಕೆ ಠಾಣೆಯ ಇನ್ಸ್​ಪೆಕ್ಟರ್​ ಮಂಜುನಾಥ್​ ನಾಯಕ್​ರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಮತ್ತೊಂದೆಡೆ ಬಿಜೆಪಿ ನಾಯಕರನ್ನು ಠಾಣೆಗೆ ಬಿಟ್ಟು ಸಭೆ ನಡೆಸಲು ಅವಕಾಶ ನೀಡಿದಕ್ಕೆ ಅಮಾನತು ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ : ಕರ್ನಾಟಕ ಮೂಲದ ಮೂವರು ಸೈನಿಕರು ಹುತಾತ್ಮ !

ಒಟ್ಟಾರೆಯಾಗಿ ಐಜಿಪಿ ವಿಕಾಸ್​ ಕುಮಾರ್​ ಅವರು ಖಾನಾಪುರ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಮಂಜುನಾಥ್​ ಗೌಡರನ್ನು ಅಮಾನತು ಮಾಡಿದ್ದು. ಪೊಲೀಸ್​ ಇಲಾಖೆ ಈ ಕ್ರಮ ಗುಬ್ಬಿ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಿದಂತಾಗಿರುವುದಂತು ನಿಜ ಎಂದು ಹೇಳಬಹುದಾಗಿದೆ.

RELATED ARTICLES

Related Articles

TRENDING ARTICLES