ಶ್ರೀನಗರ: ನಿನ್ನೆ (ಡಿ.25) ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನ ಹಿಮದ ಪರಿಣಾಮದಿಂದ 300 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮ ಸುಮಾರು 5 ಜನ ಸೈನಿಕರು ಮೃತಪಟ್ಟಿದ್ದರು. ಇದೀಗ ಸಾವನ್ನಪ್ಪಿದವರ ಮಾಹಿತಿ ದೊರೆತಿದ್ದು.
ಕರ್ನಾಟಕ ಮೂಲದ ಮೂರು ಜನ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.ಮೆಂಧಾರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಈ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ಮರಾಠ ರೆಜಿಮೆಂಟ್ನ ಐವರು ಸೈನಿಕರು ಸಾವನ್ನಪ್ಪಿದ್ದರು. ಇವರಲ್ಲಿ ಮೂರು ಜನ ಕರ್ನಾಟಕ ಮೂಲದ ಸೈನಿಕರಿದ್ದು, ಬೆಳಗಾವಿಯ ಪಂತ ಬಾಳೆಕುಂದ್ರಿಯ ದಯಾನಂದ ತಿರಕನ್ನವರ್, ಉಡುಪಿಯ ಕುಂದಾಪುರದ, ಜಿಜಾಡಿಯ ಯೋದ ಅನೂಪ್ ಹಗೂ ಬಾಗಲಕೋಟೆ ಮೂಲದ ಒಬ್ಬ ಯೋದರು ಸಾವನ್ನಪ್ಪಿದ್ದಾರೆ. ಇವರ ಜೊತೆಗೆ ಮಹರಾಷ್ಟ್ರದ ನಾಗ್ಪೂರ್ ಮತ್ತು ಸಾತಾ ಜಿಲ್ಲೆಯ ಯೋಧರು ಹುತಾತ್ಮರಾಗಿದ್ದಾರೆ.
ಇನ್ನು ಹಲವು ಸೈನಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನೆಯಿಂದ ಮಾಹಿತಿ ದೊರೆತಿದ್ದು.
ವಾಹನವು ನಿಲಂ ಪ್ರಧಾನ ಕಛೇರಿಯಿಂದ ಬಲ್ನೋಯಿ ಘೋರಾ ಪೋಸ್ಟ್‌ಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.