ಬೆಂಗಳೂರು : ರಾಜಧಾನಿಯಲ್ಲಿ ಸರಣಿ ಅಪಘಾತವಾಗಿದ್ದು. ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿಯಲ್ಲಿ KSRTC ಬಸ್, ಆಟೋ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಚಾಲಕರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಸೈಬರ್ ವಂಚನೆ : 12 ಕೋಟಿ ಕಳೆದುಕೊಂಡ ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ !
ಬೆಂಗಳೂರಿನ ಮೈಸೂರು ರಸ್ತೆಯ, ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿಯಲ್ಲಿ ಅಪಘಾತ ಸಂಭವಿಸಿದ್ದು. KSRTC ಬಸ್ನ್ನು ಆಟೋ ಓವರ್ಟೇಕ್ ಮಾಡಲು ಮುಂದಾಗಿದೆ. ಈ ವೇಳೆ ದುರ್ಘಟನೆ ಸಂಭವಿಸಿದೆ. ಅಪಘಾತ ರಭಸಕ್ಕೆ ಬಸ್ ಡಿವೈಡರ್ ಗುದ್ದಿ ಹೊರಗೆ ಬಂದಿದ್ದು. ಅಪಘಾತದ ಪರಿಣಾಮವಾಗಿ ಆಟೋ, ಕಾರು, ಖಾಸಗಿ ಬಸ್ಗಳು ಜಖಂ ಆಗಿದೆ ಎಂದು ಮಾಹಿತಿ ದೊರೆತಿದೆ.
ಅಪಘಾತದಲ್ಲಿ ಇಬ್ಬರು ಚಾಲಕರಿಗೆ ಗಂಭೀರ ಗಾಯವಾಗಿದ್ದು. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.