Monday, January 27, 2025

ಫುಟ್​​ಪಾತ್​ ಮೇಲೆ ಮಲಗಿದ್ದವರ ಮೇಲೆ ಹರಿದ ಲಾರಿ : ಮೂವರು ಸಾ*ವು !

ಪುಣೆಮಹರಾಷ್ಟ್ರದ ಪುಣೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು. ಪುಟ್​ಪಾತ್​ನಲ್ಲಿ ಮಲಗಿದ್ದವರ ಮೇಲೆ ಡಂಪರ್​ ಲಾರಿ ಹರಿದ ಪರಿಣಾಮ 3 ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕುಡಿದ ಮತ್ತಿನಲ್ಲಿದ್ದ ಚಾಲಕ ಅಜಾಗರೂಕತೆಯಿಂದಾಗಿ ಅಪಘಾತ ಸಂಭವಿಸಿದ್ದು. ಪೊಲೀಸರು ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾನುವಾರ ಮುಂಜಾನೆ ಪುಣೆಯ ವಾಘೋಲಿ ಚೌಕ್ ಪ್ರದೇಶದಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದಾಗ ಡಂಪರ್ ಟ್ರಕ್ ಹರಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂರು ಜನ ಮೃತ ಪಟ್ಟಿದ್ದು. 6 ಜನರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ದುರ್ಘಟನೆಯಲ್ಲಿ ಮೃತಪಟ್ಟವರು ಅಮರಾವತಿಯಿಂದ ಪುಣೆಗೆ ವಲಸೆ ಬಂದಿದ್ದ ಕಾರ್ಮಿಕರು ಎಂದು ಗುರುತಿಸಿದ್ದು. ವೈಭವ್ ರಿತೇಶ್ ಪವಾರ್ (1 ವರ್ಷ), ರಿತೇಶ್ ವೈಭವ್ ಪವಾರ್ (2ವರ್ಷ) ಮತ್ತು ರಿನೇಶ್​ ನಿತೇಶ್​ ಪವಾರ್​ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ದಾಕಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಕುಡಿದ ಮತ್ತಿನಲ್ಲಿ ಅಪಘಾಥ ! 

ಅಪಘಾತವಾದ ಸಮಯದಲ್ಲಿ ಡಂಪರ್​ ಚಾಲಕ ಕುಡಿದ ಮತ್ತಿನಲ್ಲಿದ್ದ ಎಂದು ಉಪ ಪೊಲೀಸ್​ ಆಯುಕ್ತ ಹಿಮ್ಮತ್​ ಜಾದವ್​ ತಿಳಿಸಿದ್ದು. ಚಾಲಕನ ವಿರುದ್ದ ಮೋಟಾರು ವಾಹನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES