Monday, December 23, 2024

ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಆತ್ಮಹತ್ಯೆ : ಉಪಕುಲಪತಿ ಮೈಲಾರಪ್ಪನ ವಿರುದ್ದ ಗಂಭೀರ ಆರೋಪ

ಬೆಂಗಳೂರು : ವ್ಯಾಪ್ತಿಯ ಈಜುಕೊಳ ರಸ್ತೆ ಬಳಿ ನಡಿದಿದೆ. 45 ವರ್ಷದ ಸೋಮಶೇಖರಪ್ಪ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ.

ಬೆಂಗಳೂರಿನವರೇ ಆಗಿರೋ ಸೋಮೇಶೇಖರ್ ಲಾರಿ ಬ್ಯುಸಿನೆಸ್ ಮಾಡಿಕೊಂಡಿದ್ದರು. 2005-06ರಲ್ಲಿ ಆಗಷ್ಟೇ ಪಿಯುಸಿ ಮುಗಿಸಿದ್ದ ಪವಿತ್ರಾ ಎಂಬಾಕೆಯನ್ನ ಮದುವೆಯಾಗಿದ್ದರು. ನಂತರ ಪತ್ನಿಯನ್ನ ಬಿ.ಕಾಮ್ ಓದಿಸಿದ್ದರು. ಬಿಸಿನೆಸ್​ ಜೊತೆಗೆ ಸಂಸಾರವನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳು ಇದ್ದರು. ಆದರೆ ಪತ್ನಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಪಡೆದುಕೊಂಡಿದ್ದಳು.

ಇದನ್ನೂ ಓದಿ :  ಸತ್ತಿದ್ದಾಳೆ ಎಂದು ಕುಟುಂಬಸ್ಥರಿಂದ ತಿಥಿ : 25 ವರ್ಷಗಳ ಬಳಿಕ ಮಹಿಳೆ ಪತ್ತೆ !

ಆದರೆ ವಿವಿಯ ಉಪಕುಲಪತಿಯಾಗಿದ್ದ ಮೈಲಾರಪ್ಪನ ಜೊತೆಗೆ ಸಂಪರ್ಕ ಬೆಳೆಸಿದ್ದಳು.ಅವರಿಬ್ಬರ ನಡುವೆ ಸಲುಗೆ ಬೆಳೆದು, ಅಕ್ರಮ ಸಂಬಂಧವಿತ್ತು ಎಂಬ ಆರೋಪವಿತ್ತು. ಇದನ್ನು ತಿಳಿದಿದ್ದ ಸೋಮಶೇಖರ್​ ಪತ್ನಿಯ ಜೊತೆಗೆ ಮಾತನಾಡಿ ಅನೇಕ ಬಾರಿ ಆತನ ಸಂಪರ್ಕವನ್ನು ನಿಲ್ಲಿಸಲು ಹೇಳಿದ್ದನು. ಇದರ ಜೊತೆಗೆ ಮೈಲಾರಪ್ಪನ ಪತ್ನಿಯು ಬಂದು ಸೋಮಶೇಖರ್​ ಮನೆಗೆ ಬಂದು ವಾರ್ನ ಮಾಡಿದ್ದಳು.

ಆದರೆ ಯಾರ ಮಾತನ್ನು ಕೇಳದ ಇವರು ತಮ್ಮ ಸಂಪರ್ಕವನ್ನು ಮುಂದುವರಿಸಿದ್ದರು. ಆದರೆ ನೆನ್ನೆ ಮಧ್ಯರಾತ್ರಿ ಸುಮಾರಿಗೆ ಸೋಮಶೇಖರ್​ ಆತ್ಮಹತ್ಯೆ ಮಾಡಿಕೊಂಡಿದ್ದು. ಮೃತ ಸೋಮಶೇಖರ್​ ಸಂಬಂಧೀಕರು ಮೈಲಾರಪ್ಪನ ವಿರುದ್ದ ದೂರು ನೀಡಿದ್ದು. ಮಹಲಕ್ಷ್ಮೀಪುರಂ ಪೊಲೀಸ್​ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES