ದಾವಣಗೆರೆ : ಕುರ್-ಕುರೆ ವಿಶಯಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿದ್ದು. ಹೊಡೆದಾಟದಲ್ಲಿ ಸುಮಾರು 10 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸ್ ಬಂಧನಕ್ಕೆ ಹೆದರಿ ಸುಮಾರು 25 ಜನ ಗ್ರಾಮ ತೊರೆದಿದ್ದಾರೆ ಎಂದು ತಿಳಿದು ಬಂದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನೇಬಾಗಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಗ್ರಾಮದಲ್ಲಿದ್ದ ಅತೀಫ್ ಉಲ್ಲಾ ಕುಟುಂಬ ಮತ್ತು ಸದ್ದಾಂ ಕುಟುಂಬದ ನಡುವೆ ಮಾರಾಮಾರಿ ಸಂಭವಿಸಿದೆ.
ಇದನ್ನೂ ಓದಿ : ಗೆಳೆಯನ ಮದುವೆ ಮುಗಿಸಿಕೊಂಡು ಬರುವಾಗ ಅಪಘಾತ : ಓರ್ವ ಸಾ*ವು !
ಗ್ರಾಮದಲ್ಲಿ ಅತೀಫ್ ಉಲ್ಲಾ ಕುಟುಂಬದವರು ಕಿರಾಣಿ ಅಂಗಡಿ ನಡೆಸುತ್ತಿದ್ದರು. ಸದ್ದಾಂ ಕುಟುಂಬಸ್ಥರು ಇದೇ ಅಂಗಡಿಯಲ್ಲಿ ಮಕ್ಕಳಿಗೆ ಕುರುಕುರೆ ಖರೀದಿ ಮಾಡಿದ್ದಾರೆ. ಆದರೆ ಅವದಿ ಮೀರಿದ ಕುರ್ ಕುರೇ ನೀಡಿದ ಕಾರಣಕ್ಕೆ ಬೇರೆಯದನು ಕೊಡಲು ಹೇಳಿದ್ದಾರೆ. ಇದೇ ವಿಚಾರಕ್ಕೆ ಸದ್ದಾಂ ಮತ್ತು ಅತೀಫ್ ಕುಟುಂಸ್ಥರ ನಡುವೆ ಗಲಾಟೆಯಾಗಿದ್ದು. ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಹಳೆ ದ್ವೇಶದ ಹಿನ್ನೆಲೆಯಲ್ಲಿ ಈ ಗಲಾಟೆ ತಾರಕಕ್ಕೆ ಹೋಗಿದ್ದು. ಅತೀಫ್ ಕುಟುಂಬದ 30ಕ್ಕೂ ಹೆಚ್ಚು ಜನರಿಂದ ಸದ್ದಾಂ ಕುಟುಂಬಸ್ಥರ ಮೇಲೆ ಹಲ್ಲೆಯಾಗಿದೆ. ಗಲಾಟೆ ಬಿಡಿಸಲು ಬಂದವರ ಮೇಲೂ ಹಲ್ಲೆಯಾಗುದ್ದು. ಎರಡು ಕುಟುಂಬದ ಸದಸ್ಯರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗಲಾಟೆಯಲ್ಲಿ ಗಾಯಗೊಂಡ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದು. ಪೊಲೀಸರ ಭಯಕ್ಕೆ ಹೆದರಿ 25ಕ್ಕು ಹೆಚ್ಚು ಜನರು ಗ್ರಾಮವನ್ನು ತೊರೆದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.