Wednesday, January 22, 2025

ಗೆಳೆಯನ ಮದುವೆ ಮುಗಿಸಿಕೊಂಡು ಬರುವಾಗ ಅಪಘಾತ : ಓರ್ವ ಸಾ*ವು !

ಹುಬ್ಬಳ್ಳಿ : ಸ್ನೇಹಿತನ ಮದುವೆಗೆ ಹೋಗಿದ್ದ ಯುವಕರು ವಾಪಸ್​ ಬರುವ ವೇಳೆ ಅಪಘಾತವಾಗಿದ್ದು. ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವಾಗಿದ್ದು. ಐದು ಜನರಿಗೆ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ.

ಧಾರವಾಡದಿಂದ ಕಾರವಾರಕ್ಕೆ ಸ್ನೇಹಿತನ ಮದುವೆಗೆಂದು ತೆರಳಿದ್ದ ಯುವಕರು ಮದುವೆ ಮುಗಿಸಕೊಂಡು ಬರುವಾಗ ಧಾರವಾಡದ ಕಲಘಟಗಿ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಅಪಘಾತ ಸಂಭವಿಸಿದ್ದು. ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಓರ್ವ ವ್ಯಕ್ತಿ ಮೃತ ಪಟ್ಟಿದ್ದು. ಉಳಿದ ಈವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ದೇವಾಸ್ಥಾನದಲ್ಲಿ ಸಿಲಿಂಡರ್​ ಬ್ಲಾಸ್ಟ್​​ : ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಸ್ಥಿತಿ ಚಿಂತಾಜನಕ !

ಮೃತ ವ್ಯಕ್ತಿಯನ್ನು 33 ವರ್ಷದ  ದೇಶಪಾಂಡೆ ಎಂದು ಗುರುತಿಸಿದ್ದು. ಗಾಯಗೊಂಡ ಐವರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

RELATED ARTICLES

Related Articles

TRENDING ARTICLES