Monday, December 23, 2024

ಸತ್ತಿದ್ದಾಳೆ ಎಂದು ಕುಟುಂಬಸ್ಥರಿಂದ ತಿಥಿ : 25 ವರ್ಷಗಳ ಬಳಿಕ ಮಹಿಳೆ ಪತ್ತೆ !

ಬಳ್ಳಾರಿ : ಸುಮಾರು 25 ವರ್ಷಗಳಿಂದ ಡಣನಾಯಕಕೆರೆಯಿಂದ ರೈಲು ಹತ್ತಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ವೃದ್ದಾಶ್ರಮ ಸೇರಿದ ಸಾಕಮ್ಮನ ಕಥೆಯ ಯಾವ ಸಿನಿಮೀಯಾ ಕಥೆಗಿಂತ ಕಡಿಮೆ ಇಲ್ಲ. ಸಾಕಮ್ಮಳು ಕೆಂಚ್ಚಿನ ಬಂಡಿ ಗ್ರಾಮದ ನಾಗೇಶ್ ಎನ್ನುವವರನ್ನು ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ರು.

ಇವರಿಗೆ ಮೂವರು ಮಕ್ಕಳು ಕೂಡ ಇದ್ದರು. ಆದರೆ ಮಾನಸಿಕ ಅಸ್ವಸ್ತರಾಗಿದ್ದ ಸಾಕಮ್ಮ ರೈಲು ಹತ್ತಿ ಹಿಮಾಚಲ ಪ್ರದೇಶದ ಮಂಡಿಗೆ ಹೋಗಿದ್ದರು. ಅಲ್ಲಿ ಒಂದು ವೃದ್ದಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ಆದರೆ ಸಾಕಮ್ಮ ಸತ್ತಿದ್ದಾಳೆ ಎಂದು ಆಕೆಯ ಮಕ್ಕಳು ಆಕೆಯ ಪೂರ್ವಾಧಿ ಕ್ರಿಯೆಗಳನ್ನು ಮುಗಿಸಿದ್ದರು.

ಆದರೆ ಮಂಡ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಸನ ಮೂಲದ ಐಪಿಎಸ್​ ಅಧಿಕಾರಿ ರವಿ ನಂದನ್​ ಎಂಬುವವರು ಸಾಕಮ್ಮ ಅವರನ್ನು ಮಾತನಾಡಿಸಿ ವಿಡಿಯೋ ಮಾಡಿ ಅದನ್ನು ಬೆಂಗಳೂರಿನಲ್ಲಿದ್ದ ಅವರ ಸ್ನೇಹಿತ ವಿಜಯ್​ ಕುಮಾರ್​ ಎಂಬುವವರಿಗೆ ಕಳುಹಿಸಿದ್ದರು. ಅದನ್ನು ವಿಜಯ್​ಕುಮಾರ್​ ಅವರು ತಮ್ಮ ಎಕ್ಷ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ : ಬಳ್ಳಾರಿ, ಬೆಳಗಾವಿ ನಂತರ ಬೆಂಗಳೂರು ಸರದಿ : ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು !

ಈ ವಿಡಿಯೋದಲ್ಲಿ ಮಹಿಳೆ ಸಾಕಮ್ಮ ತಮ್ಮ ಊರಿನ ಹೆಸರು, ಆಕೆಯ ಕುಟುಂಬದ ಬಗ್ಗೆ ವಿವರಿಸಿದ್ದರು. ಇದರ ಬಗ್ಗೆ ಗಮನ ಹರಿಸಿದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್​ ಸಾಕಮ್ಮರನ್ನು ಮಂಡಿಯಿಂದ ಕರೆತರಲು ಮಂಡಿಯ ಪೊಲೀಸ್​ ವರಿಷ್ಠಾಧಿಕಾರಿ ರವಿನಂದನ್​ ಅವರೊಂದಿಗೆ ಗುರುವಾರ ಚರ್ಚಿಸಿದ್ದರು.

ಅದನ್ನು ವಿಜಯ್‌ಕುಮಾರ್ ಗುರುವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದರು.ಪೋಸ್ಟ್ ನೋಡಿದ ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರು ಸಾಕಮ್ಮ ಅವರನ್ನು ಕರೆತರುವ ಸಂಬಂಧ ಮಂಡಿ ಜಿಲ್ಲೆಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿನಂದನ್ ಅವರೊಂದಿಗೂ ಗುರುವಾರ ಚರ್ಚಿಸಿದರು. ಈ ಕಾರ್ಯವನ್ನು ಪೂರ್ಣಗೊಳಿಸುವ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆ ವಹಿಸಿಕೊಂಡಿದೆ.

ಇದನ್ನೂ ಓದಿ : ಹಾಸ್ಟೆಲ್​ ಮಂಚಕ್ಕೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡ ಯುವತಿ !

ಇದರ ಬೆನ್ನಲ್ಲೆ ಸಾಕಮ್ಮರನ್ನು ಕರೆತರಲು ಒಬ್ಬ ಮಹಿಳಾ ಸಿಬ್ಬಂದಿ ಸೇರಿದಂತೆ 5 ಜನರ ತಂಡ ಚಂಡೀಗಡಕ್ಕೆ ತೆರಳಿದ್ದು. ಅಲ್ಲಿಂದ ಮಂಡಿಗೆ ತೆರಳಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮಂಗಳವಾರ ಸಂಜೆ ವೇಳೆಗೆ ಸಾಕಮ್ಮರನ್ನು ರಾಜ್ಯಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್​ ತಿಳಿಸಿದ್ದಾರೆ.

ಸಾಕಮ್ಮ ಮಾನಸಿಕ ಅಸ್ವಸ್ಥಳಾಗಿ 25 ವರ್ಷಗಳಿಂದ ಕುಟುಂಬದಿಂದ ದೂರ ಉಳಿದ್ದಿದ್ದಾಳೆ.ಆದ್ರೇ ಮತ್ತೆ ಈಗ ಮನೆಗೆ ವಾಪಸ್ಸ್ ಬರುತ್ತಿರುವುದು ಸಾಕಷ್ಟು ಖುಷಿ ತಂದಿದೆ ಎಂದು ಸಂಬಂಧಿಕರು ಆನಂದಬಾಷ್ಪ ಹರಿಸಿದ್ದಾರೆ.

 

RELATED ARTICLES

Related Articles

TRENDING ARTICLES