ಹೈದರಾಬಾದ್ : ಪುಷ್ಪ 2 ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಘಟನೆ ಭಾರೀ ನೂಕುನುಗ್ಗಲಿಗೆ ತಿರುಗಿದ್ದು ಗೊತ್ತೇ ಇದೆ. ಆದರೆ ಈ ಘಟನೆ ಈಗಾಗಲೇ ರಾಜಕೀಯ ತಿರುವು ಪಡೆದುಕೊಂಡಿದೆ ಎನ್ನಬಹುದು. ಆದರೆ ಇಂದು ಒಂದಷ್ಟು ಜನ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲೂತೂರಾಟ ನಡೆಸಿದ್ದು. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಅಲ್ಲು ಅರ್ಜುನ್ ಕೂಡ ರಾತ್ರಿ ಪ್ರೆಸ್ ಮೀಟ್ ನಡೆಸಿ ತಮ್ಮದೇ ಶೈಲಿಯಲ್ಲಿ ವಿವರಣೆ ನೀಡಿದ್ದಾರೆ. ತೆಲಂಗಾಣ ಡಿಜಿಪಿ ಕೂಡ ಅಲ್ಲು ಅರ್ಜುನ್ ಮೇಲೆ ನಮಗೆ ಯಾವುದೇ ಕೋಪವಿಲ್ಲ, ಅವರು ಅವರನ್ನು ಎಲ್ಲರಂತೆ ನಡೆಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಅದಲ್ಲದೆ ಸೆಲೆಬ್ರಿಟಿಗಳಿಗೆ ಒಂದು ಕಾನೂನು, ಸಾಮಾನ್ಯರಿಗೆ ಇನ್ನೊಂದು ಕಾನೂನು ಎಂಬುದಿಲ್ಲ ಎಲ್ಲರು ಸಮಾನರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮಹಿಳಾ ವೈದ್ಯ ಸಿಬ್ಬಂದಿಗಳ ಭದ್ರತೆಗೆ ಆ್ಯಪ್ ಮೊರೆ ಹೋದ ಜಯದೇವ ಆಸ್ಪತ್ರೆ : ಏನಿದು ‘ಸುಹೃದ್’ ಆ್ಯಪ್ !
ಮತ್ತೊಂದೆಡೆ ಕಾಂಗ್ರೆಸ್ ಸಚಿವರು, ಮುಖಂಡರು ಕೂಡ ಅಲ್ಲು ಅರ್ಜುನ್ ಸಿಎಂ ರೇವಂತ್ ರೆಡ್ಡಿ ಅವರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇಂದು ಅಪರಿಚಿತರು ಏಕಾಏಕಿ ಅಲ್ಲು ಅರ್ಜುನ್ರ ಜುಬಲಿ ಹಿಲ್ಸ್ ಮನೆಯ ಮೇಲೆ ಕಲ್ಲೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲೆಸೆತ !
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸುತ್ತ ವಿವಾದಗಳು ಉಲ್ಬಣಗೊಳ್ಳುತ್ತಿವೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಈಗಾಗಲೇ ನಟನ ವಿರುದ್ಧವಾಗಿದೆ. ಇದೀಗ ಒಯುಜೆಎಸಿ ಮುಖಂಡರೆಂದು ಹೇಳಿಕೊಳ್ಳುವ ಕೆಲ ಅಪರಿಚಿತ ವ್ಯಕ್ತಿಗಳು ಜುಬಿಲಿ ಹಿಲ್ಸ್‌ನಲ್ಲಿರುವ ಅಲ್ಲು ಅರ್ಜುನ್ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಕಲ್ಲೂ ತೂರಾಟ ನಡೆಸಿರುವ ಅಪರಿಚಿತರು ಮೃತ ಸಂಧ್ಯಾ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದು. ಅಲ್ಲು ಅರ್ಜುನ್ ಮೃತ ಕುಟುಂಬದ ಜೊತೆ ನಿಲ್ಲುವಲ್ಲಿ ವಿಫಲರಾಗಿದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಇದಕ್ಕೆ ಅಲ್ಲು ಅರ್ಜುನ್ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.