Sunday, December 22, 2024

ಕಲಬುರಗಿಯಲ್ಲಿ ನೂತನ ಜಯದೇವ ಆಸ್ಪತ್ರೆ ಉದ್ಘಾಟನೆ ನಡೆಸಿದ ಸಿದ್ದರಾಮಯ್ಯ !

ಕಲಬುರಗಿ : ನಗರದ ಡಾ. ಎಸ್​.ಎಂ ಪಂಡಿತ್​ ರಂಗಮಂದಿರದ ಎದುರಿನ ಏಳು ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಜಯದೇವ ಹೃದ್ರೋಗ ವಿಜ್ಙನ ಮತ್ತು ಸಂಶೋಧನ ಸಂಸ್ಥೆಯ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ್​ ಖರ್ಗೆ ಉದ್ಘಾಟಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ,ಕೆ ಶಿವಕುಮಾರ್​ ಗೈರಾಗಿದ್ದರು.

ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವಿಕ್ಷೀಸದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರೊಂದಿಗೆ ಸೇರಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಒಟ್ಟು 371 ಬೆಡ್​ ಸಾಮರ್ಥ್ಯವಿರುವ ನೂತನ ಜಯದೇವ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರು.

ಆಸ್ಪತ್ರೆ ಬೆಡ್​ ಸಾಮಾರ್ಥ್ಯ 371 ಏಕೆ !

ಸಂವಿಧಾನದ ಅನುಚ್ಚೇದ 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಷೇಶ ಅನುದಾನ ನೀಡಲಾಗುತ್ತಿದ್ದು. ಅದರ ಅನುದಾನದಲ್ಲಿ ಜಯದೇವ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಅದರ ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುಚ್ಚೇದ 371 ನೀಡಿದ 10ನೇ ವರ್ಷದ ಸವಿ ನೆನಪಿಗಾಗಿ ಆಸ್ಪತ್ರೆ ಬೆಡ್​ ಸಾಮರ್ಥ್ಯವನ್ನು 371 ಇಡಲಾಗಿದೆ. ಈ ಜಯದೇವ ಹೃದ್ರೋಗ ಆಸ್ಪತ್ರೆ ರಾಜ್ಯದ ಮೂರನೇ ಹೃದಯ ಆಸ್ಪತ್ರೆ ಎಂಬ ಕೀರ್ತಿಗೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES