Wednesday, January 22, 2025

ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬಡಿಸಲು ಬಂದ ಪ್ರಗತಿಪರರು : ಬಾಡೂಟವನ್ನು ವಶಕ್ಕೆ ಪಡೆದ ಪೊಲೀಸರು

ಮಂಡ್ಯ : ಕಳೆದ ಎರಡು ದಿನಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು ಗೊಂದಲ ಏರ್ಪಟ್ಟಿದ್ದು. ಪ್ರಗತಿಪರರು ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದ ಸ್ಥಳದಲ್ಲಿ ಬಾಡೂಟ ಬಡಿಸಲು ಬಂದ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಬಾಡೂಟವನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಸಾಹಿತ್ಯ ಸಮ್ಮೇಳನಕ್ಕೂ ಮೊದಲೆ ಜಿಲ್ಲೆಯಲ್ಲಿ ಪ್ರಗತಿಪರರು ಬಾಡೂಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಇವರ ಬೇಡಿಕೆಯನ್ನು ಜಿಲ್ಲಾಡಳಿತ ತಿರಸ್ಕರಿಸಿದ ಹಿನ್ನಲೆಯಲ್ಲಿ ಪ್ರಗತಿಪರರು ಜನರಿಂದಲೇ ಕುರಿ, ಕೋಳಿ ಸಂಗ್ರಹ ಮಾಡಿ ಬಾಡೂಟ ಬಡಿಸಲು ಯೋಜನೆ ರೂಪಿಸಿದ್ದರು.

ಇದೇ ಯೋಜನೆಯ ಭಾಗವಾಗಿ ಇಂದು ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದ ಜಾಗಕ್ಕೆ ಬಂದಿರುವ ಪ್ರಗತಿಪರರು ಸಸ್ಯಾಹಾರಕ್ಕೆ ವಿರುದ್ದವಾಗಿ ಬಿರಿಯಾನಿ ಕೊಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರಗತಿಪರರ ನಡುವೆ ಘರ್ಷಣೆ ಉಂಟಾಗಿದ್ದು. ಪೊಲೀಸರು ಪ್ರಗತಿಪರರು ತಂದಿದ್ದ ಕೋಳಿಸಾರು, ಅನ್ನ, ಮೊಟ್ಟೆ, ಕಬಾಬನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES