ವಿಜಯಪುರ : ನೆಲಮಂಗಲ ಭೀಕರ ಅಪಘಾತದಲ್ಲಿ ಸಾವೀಗೀಡಾಗಿದ್ದ 6 ಜನರ ಮೃತದೇಹಗಳು ಮಹಾರಾಷ್ಟ್ರದ ಸ್ವಗ್ರಾಮಕ್ಕೆ ತಲುಪಿದ್ದು, ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ.
ಇಂದು (ಡಿ.22) ಬೆಳಿಗ್ಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೃತದೇಹಗಳು ರವಾನೆಯಾಗಿವೆ. ಮೂರು ಅಂಬುಲೆನ್ಸ್ ಮೂಲಕ ಆರು ಮೃತದೇಹಗಳನ್ನು ಕರೆತರಲಾಗಿದೆ. ಮೃತದೇಹಗಳನ್ನು ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೊರಬಗಿ ಗ್ರಾಮದಲ್ಲಿ ಆವರಿಸಿದ ನೀರವ ಮೌನ !
ಮೃತ ಕುಟುಂಬ ಸದಸ್ಯರನ್ನ ನೆನೆಸಿಕೊಂಡ ಮೊರಬಗಿ ಗ್ರಾಮಸ್ಥರು ಕಣ್ಣೀರಿಟ್ಟಿದ್ದು. ಬಡತನದಲ್ಲಿ ಬೆಳೆದು ದೊಡ್ಡ ಸಾಧನೆ ಮಾಡಿದ್ದ ಚಂದ್ರಾಮ ಏಗಪ್ಪಗೊಳ. ನಮ್ಮೂರಿನ ಹುಡುಗರಿಗೆ ಬೆಂಗಳೂರಿನಲ್ಲಿ ಕರೆದುಕೊಂಡು ಹೋಗಿ ಕೆಲಸ ಕೊಟ್ಟಿದ್ದ ಎಂದು ಗ್ರಾಮಸ್ಥರು ಮೃತ ಚಂದ್ರಾಮ ಏಗಪ್ಪತಗೋಳರನ್ನು ನೆನಪಿಸಿಕೊಂಡಿದ್ದಾರೆ. ನೂರಾರು ಯುವಕರಿಗೆ ಕೆಲಸ ಕೊಟ್ಟಿದ್ದ ಚಂದ್ರಾಮ ಕುಟುಂಬ ಇಡೀ ಗ್ರಾಮಕ್ಕೆ ಒಳ್ಳೆಯ ಕುಟುಂಬವೆಂದು ಚಂದ್ರಾಮನ ಸ್ನೇಹಿತರು ಮೃತರನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.