Sunday, December 22, 2024

ಹೃದಯವಂತಿಕೆಯಿಂದ ಬಂದು ನೆರವಾಗಿ : ಜಯದೇವ ಆಸ್ಪತ್ರೆಯ ಹೊಸ ಆ್ಯಪ್​ ವೈಶಿಷ್ಟ್ಯತೆ ಏನು !

ಬೆಂಗಳೂರು : ಇತ್ತೀಚೆಗೆ ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೆ ಬೆಚ್ಚಿಬೀಳಿಸಿತ್ತು. ಇದರ ಬೆನ್ನಲ್ಲೆ ಸಾಕಷ್ಟು ಪ್ರತಿಭಟನೆಗಳು, ಹೋರಾಟಗಳು ಕೂಡ ನಡೆದಿದ್ದವು. ಇದರ ಬಗ್ಗೆ ಟಾಸ್ಕ್​ಪೋರ್ಸ್​ ರಚಿಸಿದ್ದ ಸುಪ್ರೀಂಕೋರ್ಟ್​ ಮಹಿಳಾ ಸಿಬ್ಬಂದಿಗಳ ರಕ್ಷಣೆಗೆ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ ಬೆಂಗಳೂರಿನ ಜಯದೇವ ಆಸ್ಪತ್ರೆ ತಮ್ಮ ಸಿಬ್ಬಂದಿಗಳ ರಕ್ಷಣೆಗಾಗಿ ಆ್ಯಪ್​ ಮೊರೆ ಹೋಗಿದ್ದು. ‘ ಸುಹೃದ್ ‘ ಎಂಬ ಆ್ಯಪ್​ ಬಿಡುಗಡೆಗೊಳಿಸಿದೆ.

ಆ್ಯಪ್​ನ ಉದ್ದೇಶವೇನು !

ಪ್ರಮುಖವಾಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗಳಿಗೆ ಭದ್ರತೆ ಒದಗಿಸುವುದು ಮತ್ತು ಆಸ್ಪತ್ರೆಯ ಯಾವುದೇ ಕರ್ತವ್ಯನಿರತ ಸಿಬ್ಬಂದಿಗೆ ತೊಂದರೆಯಯಾದರೆ ಒಬ್ಬರಿಗೊಬ್ಬರು ಹೃದಯವಂತಿಕೆಯಿಂದ ನೆರವಾಗಲಿ ಎಂಬ ಉದ್ದೇಶದಿಂದ ಇದನ್ನು ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ : ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಶಸ್ತ್ರಚಿಕಿತ್ಸೆ ಬಳಿಕ ಸಾವು !

ಏನಿದು ‘ಸುಹೃದ್’ ? ಹೇಗೆ ಕಾರ್ಯನಿರ್ವಹಿಸಲಿದೆ !

ಸುಹೃದ್ ಅಂದರೆ ಸಂಸ್ಕೃತದಲ್ಲಿ ಒಳ್ಳೆಯ ಹೃದಯ ಎಂದರ್ಥ. ಯಾವುದೇ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದಾಗ ಫೋನ್ ಮಾಡಲು ಅಥವಾ ಮೆಸೇಜ್ ಮೂಲಕ ರಕ್ಷಣೆಗೆ ಸಹಾಯ ಕೇಳೋದು ಆ ಸಂದರ್ಭದಲ್ಲಿ ಕಷ್ಟಕರ. ಆದರೆ ಈ ಆ್ಯಪ್​ನ ಸಹಾಯದಿಂದ ಸಿಬ್ಬಂದಿ ತನ್ನ ಮೊಬೈಲ್​ನ್ನು ಮೂರು ಬಾರಿ ಶೇಕ್ ಮಾಡಿದರೆ ಸಾಕು. ಆ್ಯಪ್ ಇನ್​ಸ್ಟಾಲ್ ಮಾಡಿಕೊಂಡಿರುವ ಇತರ ಸಿಬ್ಬಂದಿಗಳಿಗೆ, ಭದ್ರತಾ ಸಿಬ್ಬಂದಿಗಳಿಗೆ ಸಂದೇಶ ಹೋಗುತ್ತದೆ.

ಈ ಆ್ಯಪ್​ ಯಾವ ಮೊಬೈಲ್​ನಲ್ಲಿ ಇನ್​ಸ್ಟಾಲ್​ ಆಗಿರುತ್ತದೆಯೋ ಅವರೆಲ್ಲರಿಗೂ ಈ ಮೆಸೇಜ್​ ಹೋಗುವುದರಿಂದ. ಕಷ್ಟದಲ್ಲಿರುವ ಸಿಬ್ಬಂದಿಗೆ ಸೂಕ್ತ ಸಮಯದಲ್ಲಿ ಭದ್ರತೆ ಸಿಗುತ್ತದೆ. ಜಿ.ಪಿ.ಎಸ್​ ಸಮೇತ ಮೆಸೇಜ್​ ಹೋಗುವುದರಿಂದ ತಕ್ಷಣ ಸಹಾಯ ಮಾಡಲು ಅನುಕೂಲ ಆಗಲಿದೆ.

ಒಟ್ಟಿನಲ್ಲಿ ಆಸ್ಪತ್ರೆಯ ಈ ವಿನೂತನ ಪ್ರಯೋಗ ಮಹಿಳಾ ಸಿಬ್ಬಂದಿಗಳ ಹಿತದೃಷ್ಟಿಯಲ್ಲಿ ಹೆಚ್ಚು ಸಹಾಯಕರವಾಗಿದೆ.

RELATED ARTICLES

Related Articles

TRENDING ARTICLES