Wednesday, January 22, 2025

ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಶಸ್ತ್ರಚಿಕಿತ್ಸೆ ಬಳಿಕ ಸಾವು !

ಮೈಸೂರು : ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ, ಶಸ್ತ್ರಚಿಕಿತ್ಸೆಯ ನಂತರ ಮರಣ ಹೊಂದಿದ ಘಟನೆ ಮೈಸೂರಿನಲ್ಲಿ ನಡೆದಿದ್ದು. ಇದೀಗ ಬಾಲಕಿಯ ಪೋಷಕರು ವೈದ್ಯರ ನಿರ್ಲಕ್ಷದಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ.

14 ವರ್ಷ ವಯಸ್ಸಿನ ಲಕ್ಷ್ಮೀ ಎಂಬ ಬಾಲಕಿ ಮೈಸೂರಿನ ಶಾರಾದಾ ದೇವಿನಗರದ ಪೋಷಕರೊಂದಿಗೆ ವಾಸಿಸುತ್ತಿದ್ದಳು. ಆದರೆ ಇತ್ತೀಚೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೊಟ್ಟೆನೋವಿನ ಚಿಕಿತ್ಸೆಗಾಗಿ ಜನತಾನಗರ ಕಾಂಗ್ರೆಸ್ ಮುಖಂಡ ಜೆಜೆ ಆನಂದ್ ಒಡೆತನದ ಮೌರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾಳೆ. ಇದೇ ವೇಳೆ ಹೊಟ್ಟೆಯಲ್ಲಿ ಸಣ್ಣ ಗೆಡ್ಡೆ ಇದೆ ಅನ್ನೋ ಕಾರಣಕ್ಕಾಗಿ ಆಪರೇಷನ್ ಮಾಡಿದ್ದಾರೆ ಎನ್ನಲಾಗಿದ್ದು. ಆಪರೇಷನ್ ಮಾಡುವ ವೇಳೆ ಅತಿಯಾದ ಅನಾಸ್ತೇಶಿಯಾ ಬಳಕೆ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ ಕುವೈತ್​ !

ಬಾಲಕಿಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿಗಳು ಬಾಲಕಿಯನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದರೆ ಬಾಲಕಿ ಸಾವನ್ನಪ್ಪುತ್ತಿದ್ದಂತೆ ಪೋಷಕರ ಕುಟುಂಬಸ್ಥರು ವೈದ್ಯರ ನಿರ್ಲಕ್ಷವೇ ಬಾಲಕಿಯ ಸಾವಿಗೆ ಕಾರಣ ಎಂದು ಆರೋಪಿಸಿದ್ದು. ಬಾಲಕಿಯ ಪೋಷಕರು ಆಸ್ಪತ್ರೆ ಮುಂಬಾಗ ಪ್ರತಿಭಟನೆ ನಡೆಸಿ. ಆಸ್ಪತ್ರೆ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಬಾಲಕಿಯ ಸಾವಿನ ಬಗ್ಗೆ ಆಸ್ಪತ್ರೆ ಮಾಲೀಕ ಜೆಜೆ. ಆನಂದ್​ ಸ್ಪಷ್ಟೀಕರಣ ನೀಡಿದ್ದು. 14 ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಬಾಲಕಿ 40 ಕೆ.ಜಿ ತೂಕ ಹೊಂದಿದ್ದಳು. ಶಸ್ತ್ರಚಿಕಿತ್ಸೆ ಬಳಿಕ ಬಾಲಕಿಯನ್ನು ಐಸಿಯುಗೆ ಶಿಫ್ಟ್​ ಮಾಡಲಾಗಿತ್ತು. ಆದರೆ ಬಾಲಕಿ ಉಸಿರಾಟದ ಸಮಸ್ಯೆ ಮತ್ತು ಕಾರ್ಡಿಯಾಕ್​ ಅರೆಸ್ಟ್​ ಆಗಿದೆ. ತಕ್ಷಣವೆ ನಾವು ಆಸ್ಪತ್ರೆಗೆ ಶಿಫ್ಟ್​ ಮಾಡಿದ್ದೆವು . ಆದರೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರ ಆರೋಪವನ್ನು ತಿರಸ್ಕರಿಸಿದ್ದಾರೆ.

 

RELATED ARTICLES

Related Articles

TRENDING ARTICLES