ಶಿವಮೊಗ್ಗ : ಮಾಜಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಸಿ,ಟಿ ರವಿಯ ಬಂದನದ ಕುರಿತು ಮಾತನಾಡಿದ್ದು. ಪೊಲೀಸರು ಸಿ,ಟಿ ರವಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಬಂಧಿಸಿದ್ದರು. ಆದರೆ ಮಾಧ್ಯಮದವರು ಇದ್ದ ಕಾರಣ ಇದು ನಡೆಯಲಿಲ್ಲ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮಾತಮಾಡಿದ ಅರಗ ಜ್ಞಾನೇಂದ್ರ ‘ ಸಿ,ಟಿ ರವಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಪೊಲೀಸರು ಸಿ,ಟಿ ರವಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಬಂಧಿಸಿದ್ದರು. ಠಾಣೆಗೆ ಕರೆದೊಯ್ಯದೆ ರಾತ್ರಿಯಿಡಿ ಹಿಂಸೆ ನೀಡಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಈ ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಮರ ಕತ್ತರಿಸುವ ಯಂತ್ರ ಮಾರುವ ನೆಪದಲ್ಲಿ ಮನೆಗೆ ಬಂದು ಕೊ*ಲೆ ಮಾಡಿದ ದುರುಳ !
ವಿಧಾನಸಭೆಯಲ್ಲಿ ರಾಷ್ಟ್ರದ್ರೋಹಿ ಕೂಗು ಕೂಗಿದವರನ್ನು ಬಂಧಿಸದೆ ಕಾಲಹರಣ ಮಾಡಿದರು. ಆದರೆ ಈ ಪ್ರಕರಣದಲ್ಲಿ ಇಷ್ಟೋಂದು ಅರ್ಜೇಂಟ್ ಏನಿತ್ತು. ಸಿ,ಟಿ ರವಿಯನ್ನು ಬಂಧಿಸಿದ ದಿನ ಮಾಧ್ಯಮದವರು ಅವರನ್ನು ಉಳಿಸಿದ್ದಾರೆ. ಅಂದು ರಾತ್ರಿಯೆಲ್ಲಾ ಪೊಲೀಸರ ಚಲನ ವಲನದ ಬಗ್ಗೆ ಹಿಂಬಾಲಿಸದ್ದಾರೆ. ಸಿ,ಟಿ ರವಿ ಅವರ ಅದೃಷ್ಟ ಗಟ್ಟಿಯಾಗಿದ್ದರಿಂದ ಅವರು ಬದುಕಿ ಬಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಗೂಂಡಾಗಳಿಗೆ ರಕ್ಷಣೆ ನೀಡುತ್ತಿದೆ !
ವಿಧಾನಸಭೆಯ ಒಳಗೆ ಗನ್‌ಮ್ಯಾನ್ ಹಾಗೂ ಶಾಸಕರ ಪಿ.ಎ ಗಳಿಗು ಒಳಗೆ ಬರಲು ಅನುಮತಿ ಇಲ್ಲ. ಆದರೆ ಸಿ,ಟಿ ರವಿಯವರಿಗೆ ವಿಧಾನ ಪರಿಷತ್ ಒಳಗ ನುಗ್ಗಿ ಹಲ್ಲೆ ಮಾಡಿದ್ದಾರೆ. ಇಲ್ಲಿ ಶಾಸಕರಿಗೆ ರಕ್ಷಣೆ ಇಲ್ಲ ಎಂದ ಮೇಲೆ ಸಾಮಾನ್ಯರ ಪರಿಸ್ಥತಿ ಹೇಗಿರಬಹುದು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 19 ತಿಂಗಳೂ ಕಳೆದಿದೆ. ಈ ಅವಧಿಯಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಎಲ್ಲಿ ನೋಡಿದರು ಲಂಚ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಇನ್ನು ವಾಲ್ಮೀಕಿ ಹಗರಣದಿಂದ ಹೊರಬರಲು ಸಾಧ್ಯವಾಗಿಲ್ಲ. ಸರ್ಕಾರ ಜನರ ಸಾಮಾನ್ಯರ ಬದುಕಿಗೆ ಬೆಂಕಿ ಇಟ್ಟಿದೆ. ಈ ಕೂಡಲೆ ಸರ್ಕಾರ ಸಿ,ಟಿ ರವಿ ಬಂಧನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಹೇಳಿದರು.