ಮಂಡ್ಯ : ಮರ ಕತ್ತರಿಸುವ ಯಂತ್ರವನ್ನು ಮಾರಾಟ ಮಾಡುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಮಂಡ್ಯದ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದ್ದು. ರಮೇಶ್ ಎಂಬಾತನ ಹತ್ಯೆಯಾಗಿದೆ ಎಂದು ತಿಳಿದು ಬಂದಿದೆ.
ಒಂಟಿ ಮನೆಯನ್ನೆ ಗುರಿಯಾಗಿಸಿಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಮರ ಕತ್ತರಿಸುವ ಯಂತ್ರ ಮಾರಾಟ ಮಾಡಲು ಮನೆಯ ಬಳಿ ಬಂದು ದರೋಡೆಗೆ ಯತ್ನಿಸಿರುವ ಘಟನೆ ನಡೆದಿದ್ದು. ಕ್ಯಾತನಹಳ್ಳಿಯ ಒಂಟಿ ಮನೆಯಲ್ಲಿದ್ದ ರಮೇಶ್ ಮತ್ತು ಯಶೋದಮ್ಮನ ಮನೆಗೆ ಇಬ್ರಾಹಿಂ ಎಂಬ ಆಘಂತುಕ ಬಂದಿದ್ದಾನೆ. ಮನೆಯ ಬಾಗಿಲು ಬಡಿದು ಮರ ಕತ್ತರಿಸುವ ಯಂತ್ರ ಖರೀದಿಸುವಂತೆ ಒತ್ತಾಯಿಸಿದ್ದಾನೆ.
ಈ ವೇಳೆ ಕೊಲೆ ಆರೋಪಿ ಇಬ್ರಾಹಿಂ ಮನೆ ಒಳಗೆ ಬಲವಂತವಾಗಿ ನುಗ್ಗಲು ಯತ್ನಿಸಿದ್ದಾನೆ. ಆದರೆ ರಮೇಶ್ ಈತನಿಗೆ ಪ್ರತಿರೋಧ ತೋರಿದ ಕಾರಣ ಮರ ಕತ್ತರಿಸು ಯಂತ್ರದಿಂದ ರಮೇಶ್ನನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ. ಈ ಸಮಯದಲ್ಲಿ ಯಶೋದಮ್ಮ ಮನೆಯ ಬಾಗಿಲು ಹಾಕಿ ಹೊರಗೆ ಹೋಡಿ ಬಂದಿದ್ದು. ಮಹಿಳೆಯ ಛೀರಾಟವನ್ನು ಕಂಡ ಸ್ಥಳೀಯರು ರಕ್ಷಣೆಗೆ ಬಂದಿದ್ದು ಆರೋಪಿಯನ್ನು ಥಳಿಸಿದ್ದಾರೆ.
ಗ್ರಾಮಸ್ಥರು ಆರೋಪಿ ಇಬ್ರಾಹಿಂನನ್ನು ಶ್ರೀ ರಂಗಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆಯಾದ ರಮೇಶ್ ಅವರ ಶವವನ್ನು ಶ್ರೀ ರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ. ಇನ್ನು ಮೃತ ವ್ಯಕ್ತಿ ಪತ್ನಿ ಯಶೋದಮ್ಮರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.