Wednesday, January 22, 2025

ಕುಡಿದ ಮತ್ತಿನಲ್ಲಿ ಸ್ನೇಹಿತನ ಮರ್ಮಾಂಗ ಸುಟ್ಟು ಭೀಕರ ಹತ್ಯೆ !

ಬೆಂಗಳೂರು : ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂಬ ಕಾರಣಕ್ಕೆ ಸ್ನೇಹಿತನ ಮರ್ಮಾಂಗವನ್ನೆ ಸುಟ್ಟು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಭೋವಿತಿಮ್ಮನಪಾಳ್ಯದಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನಿ ಪ್ರದೀಪ್​ ಎಂದು ಗುರುತಿಸಲಾಗಿದೆ.

ಭೋವಿತಿಮ್ಮನಪಾಳ್ಯ ನಿವಾಸಿ ಮೃತ ಪ್ರದೀಪ್ ಮದುವೆಯಾಗಿ ಹೆಂಡತಿಯನ್ನು ಬಿಟ್ಟಿದ್ದನು. ಈತನ ಸ್ನೇಹಿತನಾಗಿದ್ದ 30 ವರ್ಷದ ಚೇತನ ಪ್ರದೀಪ್​ನನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದನು. ಆದರೆ ಪ್ರದೀಪ್​ಕುಡಿದ ಮತ್ತಿನಲ್ಲಿ ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದನು. ಇದೇ ವಿಚಾರಕ್ಕೆ ಡಿಸೆಂಬರ್ 19ರಂದು  ಎಣ್ಣೆ ಮತ್ತಿನಲ್ಲಿ ಇಬ್ಬರ ನಡುವೆ ಜಗಳವಾಗಿದ್ದು. ಚೇತನ್​ ಪ್ರದೀಪ್​ನ ತಲೆಯನ್ನು ಗೋಡೆಗೆ ಹೊಡೆದು. ಸಿಗರೇಟ್​​ನಿಂದ ಮಮಾಂಗವನ್ನು ಸುಟ್ಟು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಲಿಂಗ ಕಾಮಕ್ಕೆ ಹತ್ಯೆಯಾಗಿರೋ ಸಾದ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ : ಮರ ಕತ್ತರಿಸುವ ಯಂತ್ರ ಮಾರುವ ನೆಪದಲ್ಲಿ ಮನೆಗೆ ಬಂದು ಕೊ*ಲೆ ಮಾಡಿದ ದುರುಳ !

ಸದ್ಯ ಮಾದನಾಯಕನಹಳ್ಳಿ ಪೊಲೀಸರು ಕೊಲೆ ಆರೋಪಿ ಚೇತನ್​ ಎಂಬಾತನನ್ನು ಬಂಧಿಸಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES